Slide
Slide
Slide
previous arrow
next arrow

ಈಜು ಸ್ಪರ್ಧೆ: ಲಯನ್ಸ್ ಶಿಕ್ಷಕಿ,ವಿದ್ಯಾರ್ಥಿನಿಯ ಸಾಧನೆ

300x250 AD

ಶಿರಸಿ: ಇಲ್ಲಿನ ಶ್ರೀ ಮಾರಿಕಾಂಬಾ ಕ್ರೀಡಾಂಗಣದ ಮಾರಿಕಾಂಬಾ ಕ್ರೀಡಾಂಗಣ ಈಜುಕೊಳದವರು ಆಯೋಜಿಸಿದ್ದ ತಾಲೂಕಾ ಮಟ್ಟದ ಈಜು ಸ್ಪರ್ಧೆಯಲ್ಲಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ತ್ವಿಷಾ ಹೆಗಡೆ ಭಾಗವಹಿಸಿ 12 ವರ್ಷದೊಳಗಿನ ವಯೋಮಿತಿಯವರ 25 ಮೀಟರ್ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು 14 ವರ್ಷದೊಳಗಿನ ವಯೋಮಿತಿಯವರ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ.

ಹಾಗೆಯೇ 50 ರಿಂದ 60 ವರ್ಷ ವಯೋಮಿತಿಯವರ ಈಜು ಸ್ಪರ್ಧೆಯಲ್ಲಿ ಶಾಲೆಯ ಶಿಕ್ಷಕಿ ಶ್ರೀಮತಿ ಸುಮನಾ ಹೆಗಡೆ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರ ಸಾಧನೆಗೆ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಲಯನ್ಸ್ ಸಮೂಹ ಶಾಲೆಗಳ ಪ್ರಾಚಾರ್ಯರು, ಶಿಕ್ಷಕ-ಶಿಕ್ಷಕೇತರ ವೃಂದ, ಲಯನ್ಸ್ ಬಳಗ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top