Slide
Slide
Slide
previous arrow
next arrow

ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕನ್ನಡ ವಿಜೃಂಭಿಸಬೇಕು : ಡಾ.ಎನ್.ಆರ್. ನಾಯಕ

300x250 AD

ಹೊನ್ನಾವರ : ಎಲ್ಲಾ ಭಾಷೆಗಳನ್ನು ಮೀರಿಸುವ ಶಕ್ತಿ ಕನ್ನಡ ಭಾಷೆಯಲ್ಲಿದೆ. ಇಂಥ ಭಾಷೆ ನಮ್ಮ ತಾಯಿ ಇದ್ದಂತೆ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕನ್ನಡ ವಿಜೃಂಭಿಸಬೇಕು ಎಂದು ಡಾ.ಎನ್.ಆರ್. ನಾಯಕ ಹೇಳಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನಾವರ ನಂಬರ್ ಎರಡರಲ್ಲಿ ನಡೆದ ಚೀಲರಹಿತ ಶಾಲಾ ದಿನ ಸಂಭ್ರಮ ಶನಿವಾರದ ಅಂಗವಾಗಿ ಸಾಹಿತಿಯೊಳಗಿನ ಪರಿಚಯದ ಮಾಲಿಕೆಯಡಿ ನಡೆದ ವಿಶಿಷ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಳೆ ಮಕ್ಕಳಿಗೆ ಬಿತ್ತಿದ ಸಾಹಿತ್ಯದ ಬೀಜ ಅವರ ಬದುಕಿನಲ್ಲಿ ಹೊಸ ಹುಟ್ಟಿಗೆ ಕಾರಣವಾಗಬಲ್ಲದು. ಭಾಷೆ, ಸಂಸ್ಕೃತಿ, ಪರಂಪರೆ ಮುಂದಿನ ಪೀಳಿಗೆಗೆ ವರ್ಗಾಯಿಸಲು ಇಂತಹ ಕಾರ್ಯಕ್ರಮ ನೆರವಾಗಬಲ್ಲದು ಎಂದರು. ಎಳೆ ಚಿಗುರು, ಹಸಿರು ಮುಖದ, ಮುಗ್ಧ ಮನಸ್ಸಿನ ಮಕ್ಕಳು ಮಾಡಿದ ಸನ್ಮಾನ ನನ್ನ ಬದುಕಿನ ಶ್ರೇಷ್ಠ ಸನ್ಮಾನಗಳಲ್ಲೊಂದು ಎಂದರು.

ಮುಖ್ಯ ಅತಿಥಿಯಾಗಿ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಚ್. ಎಂ. ಮಾರುತಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಮಾಂಕಿತ ಸಾಹಿತಿಗಳನ್ನು ಪರಿಚಯಿಸುವುದರ ಜೊತೆಗೆ ಅವರ ಕೃತಿಯ ಕುರಿತು ಮಾತನಾಡುವ ಕಾರ್ಯ ತುಂಬಾ ಶ್ಲಾಘನೀಯವಾದದು ಎಂದರು.

300x250 AD

ಡಾ. ಎನ್.ಆರ್.ನಾಯಕರವರ ಕೃತಿಗಳ ಕುರಿತು ಶಾಲಾ ವಿದ್ಯಾರ್ಥಿಗಳಾದ ಸೌಂದರ್ಯ ಶೇಟ, ಚಿಕ್ಕಳಬುಡ್ಡಿ ಮಕ್ಕಳ ಗೀತೆಗಳು ಸಂಕಲನವನ್ನು, ಮಕ್ಕಳ ಕಾವ್ಯದ ಕುರಿತು ತೇಜಸ್ವಿನಿ ಮೇಸ್ತ, ನಂಬಿಕೆ ಮತ್ತು ನಿಷೇಧ ಕೃತಿಯ ಕುರಿತು ಅನ್ವಿತ ಜನಾರ್ಧನ್ ತಾಂಡೇಲ, ದೇವಿ ಹೇಳಿದ ಕಿನ್ನರ ಕಥೆಗಳ ಕುರಿತು ಮನೀಶ್ ಗಂಗಾಧರ್ ನಾಯ್ಕ, ಮೂಡಲಿ ಬೆಳಕು ಕೃತಿಯ ಕುರಿತು ವರ್ಷ ಮೇಸ್ತ, ಜಾನಪದ ಸಂಬಾರ ಬಟ್ಟಲು ಕುರಿತು ಗಾಯತ್ರಿ ಮಂತ್ರಿ, ಕನಸು ಕವನ ಕೃತಿಯ ಕುರಿತು ನಾಗರಾಜ ಮೇಸ್ತ, ಅಜ್ಜಿ ತೋಟ ಕವನದ ಕುರಿತು ಧನ್ಯ ಶೇಟ್ ಮಾತನಾಡಿದರು.

ಶಿಕ್ಷಕ ಪಿ.ಆರ್. ನಾಯ್ಕರವರು ಎನ್. ಆರ್. ನಾಯಕರವರ ಸಮಗ್ರ ಬದುಕನ್ನು ಪರಿಚಯಿಸಿದರು. ವೇದಿಕೆಯಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷ ನೇತ್ರಾವತಿ ತಾಂಡೇಲ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮುಖ್ಯಾಧ್ಯಾಪಕಿ ಲುವೇಜನ್ ಪಿಂಟೋ ಸ್ವಾಗತಿಸಿದರೆ, ಶಿಕ್ಷಕಿ ಪ್ಲಾವೀಯಾ ಮೆಂಡೋನ್ಸ ವಂದಿಸಿದರು. ವಿದ್ಯಾರ್ಥಿ ವರ್ಷಾ ಮೇಸ್ತ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳು ಡಾ.ಎನ್. ಆರ್. ನಾಯಕ ರವರು ರಚಿಸಿದ ಅಜ್ಜಿತೋಟ ಕವನವನ್ನು ಅವರಿಗೆ ಅರ್ಪಿಸಿ, ಸನ್ಮಾನಿಸಿ ಗೌರವಿಸಿದ್ದರು.

Share This
300x250 AD
300x250 AD
300x250 AD
Back to top