ಶಿರಸಿ: ಇತ್ತಿಚಿನ ದಿನದಲ್ಲಿ ತೀರಾ ಅಪರೂಪ ಎನಿಸಿರುವ ಕೆಸರುಗದ್ದೆ ಕ್ರೀಡಾಕೂಟವು ತಾಲೂಕಿನ ತಾರಗೋಡಿನಲ್ಲಿ ಭಾನುವಾರ ಊರವರ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ನಡೆಯಲ್ಪಟ್ಟಿತು.
ಕ್ರೀಡಾಕೂಟದ ಉದ್ಘಾಟಕರಾಗಿ ಹಾಪ್ ಕಾಮ್ಸ್ ನಿರ್ದೇಶಕ ಕೃಷಿಕರಾದ ಶಾಂತಾರಾಮ ಹೆಗಡೆ ಅಂಬಳಿಕೆ ಆಗಮಿಸಿ ಮಾತೃಭೂಮಿ ಸೇವಾಪಡೆ ಸಂಘಟನೆಯ ವಿನೂತನ ಪ್ರಯತ್ನವನ್ನು ಶ್ಲಾಘಿಸುವುದರ ಜೊತೆಗೆ ಶುಭಕೋರಿದರು. ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಜಿಪಂ ಸದಸ್ಯೆ ರಾಜೇಶ್ವರಿ ಹೆಗಡೆ ಅರಸಾಪುರ, ಪ್ರಗತಿಪರ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಕಲ್ಲಳ್ಳಿ, ಸದಾಶಿವಳ್ಳಿ ಪಂಚಾಯತ ಅಧ್ಯಕ್ಷೆ ಶಾರದಾ ಮುಕ್ರಿ, ವಕೀಲರಾದ ಸದಾನಂದ ಭಟ್ಟ ನಡುಗೋಡು, ಶ್ರೀಪಾದ ಹೆಗಡೆ ಕಡವೆ, ಮಾತೃಭೂಮಿ ಸೇವಾಪಡೆ ಅಧ್ಯಕ್ಷ ದತ್ತಾತ್ರೇಯ ಪಟಗಾರ ಇದ್ದರು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ತಾರಗೋಡು ಭಾಗದ ಸ್ಥಳೀಯರ ಸಂಘಟನೆ ಚುರುಕಾಗಿದೆ. ಯುವಕರು, ಮಹಿಳೆಯರು ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಸಂತಸದ ವಿಷಯ ಎಂದರು. ವೇದಿಕೆಯಲ್ಲಿ ಬೆಳಲೆ ಗ್ರಾಪಂ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ ಬೆಳಲೆ, ಸದಾಶಿವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ಹೆಗಡೆ ತಾರಗೋಡು ಸೇರಿದಂತೆ ಇನ್ನಿತರರು ಇದ್ದರು.