Slide
Slide
Slide
previous arrow
next arrow

ಎಂಎಂ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

300x250 AD

ಶಿರಸಿ: ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರಾಚಾರ್ಯ ಡಾ.ಟಿ.ಎಸ್ ಹಳೆಮನೆ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸಿದರು.

ಅವರು ಈ ಸಂದರ್ಭದಲ್ಲಿ ಮಾತನಾಡಿ ಕನ್ನಡ ಏಕೀಕರಣಕ್ಕಾಗಿ ಅನೇಕ ಧೀಮಂತರು ಹೋರಾಟವನ್ನು ನಡೆಸಿದ್ದು, 1956ರಲ್ಲಿ ಪಟೇಲರ ಮಾರ್ಗದರ್ಶನದಲ್ಲಿ ಇಂದಿನ ಕರ್ನಾಟಕ ಮೈಸೂರು ರಾಜ್ಯವಾಗಿ ಸ್ಥಾಪನೆಗೊಂಡಿತು. ಇದರ ನೆನಪಿನಲ್ಲಿ ನಾವಿಂದು ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.

ಕನ್ನಡದ ನಾಡು ನುಡಿ ಅಸ್ಮಿತೆಗೆ ಸಂಬಂದಿಸಿ ಇದು ಒಂದು ದಿನದ ಆಚರಣೆಗೆ ಸೀಮಿತವಾಗದೆ ಪ್ರತಿದಿನ ಕನ್ನಡದ ಹಬ್ಬವನ್ನು ಆಚರಿಸುತ್ತಾರೆ, ಅದರ ಮೇಲಿನ ಪ್ರೀತಿಯನ್ನು ನಾವು ತೋರ್ಪಡಿಸಬೇಕಿದೆ.ಕನ್ನಡದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಕೇರಳದ ಕಾಸರಗೋಡು, ಪಕ್ಕದ ಬೆಳಗಾವಿಯಲ್ಲಿ ಮರಾಠಿಗರ ಹಾವಳಿ ಇವೆಲ್ಲಾ ಒಂದು ಹಂತದಲ್ಲಿ ಅಸ್ಮಿತೆಗೆ ಪೆಟ್ಟನ್ನು ನೀಡುತ್ತಿದೆ. ಕರ್ನಾಟಕದಲ್ಲಿ ಇರುವ ಎಲ್ಲರೂ ಕನ್ನಡಿಗರೇ ಎಂಬ ಭಾವನೆಯನ್ನು ಮೂಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ. ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನ ನಮ್ಮದಾಗಬೇಕು. ಜೊತೆಗೆ ನಾವು ಕನ್ನಡದಲ್ಲಿ ವ್ಯವಹರಿಸಬೇಕು ಎಂದರು.

300x250 AD

 ನಂತರ ಸರ್ಕಾರದ ಆದೇಶದಂತೆ ಸಂಗೀತ ವಿಭಾಗದ ವಿದ್ಯಾರ್ಥಿಗಳು ನಾಡ ಭಕ್ತಿ ಗೀತೆಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರುಗಳು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top