Slide
Slide
Slide
previous arrow
next arrow

ಸಾವಿನಲ್ಲೂ ಒಂದಾದ ದಂಪತಿ: ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

300x250 AD

ಹೊನ್ನಾವರ: ಹಲವು ದಶಕಗಳ  ಸಾರ್ಥಕ ದಾಂಪತ್ಯ ಜೀವನ ನಡೆಸಿದ ಪತಿ, ಪತ್ನಿ ಇಬ್ಬರೂ ಸಾವಿನಲ್ಲಿ ಜೊತೆಯಾದ ಅಪರೂಪದ ಘಟನೆ ತಾಲೂಕಿನ ತಲಗೋಡಿನಲ್ಲಿ ನಡೆದಿದೆ.

ತಲಗೋಡ ನಾಗ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಸುರೇಶ ಸುಬ್ರಾಯ ಮಹಾಲೆ(80) ಹಾಗೂ ಅವರ ಪತ್ನಿ (72) ವಿಜಯಾ ಸುರೇಶ ಮಹಾಲೆ  ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು, ಸ್ವಗ್ರಾಮದಲ್ಲಿ ಇಬ್ಬರ ಅಂತ್ಯಸಂಸ್ಕಾರವನ್ನು ಒಟ್ಟಿಗೆ ನಡೆಸಲಾಯಿತು.

ವಿಜಯಾ ಸುರೇಶ ಮಹಾಲೆ ಅನಾರೋಗ್ಯಕ್ಕೊಳಗಾಗಿ ಎರಡು ವಾರಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ, ಪತಿ ಸುರೇಶ ಮಹಾಲೆ ಜ್ವರದಿಂದ ಬಳಲಿ ಅದೇ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲು ಸುರೇಶ ಮಹಾಲೆ ನಿಧನರಾದ ನಂತರ ಆ ಸುದ್ದಿ ಕೇಳುತ್ತಿದ್ದಂತೆ ಪತ್ನಿ ವಿಜಯಾ ಮಹಾಲೆಯವರು ಸಹ ಮೃತರಾದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

300x250 AD

ಸುರೇಶ ಮಹಾಲೆ ಆವರು ನಾಗ ಚೌಡೇಶ್ವರಿ ದೇಗುಲದಲ್ಲಿ ದರ್ಶನ ಪಾತ್ರಿಯಾಗಿ ಹಲವು ವರ್ಷಗಳಿಂದ  ಕಾರ್ಯನಿರ್ವಹಿಸುತ್ತಾ  ಸಮಾಜ ಸೇವೆ ನಡೆಸುತ್ತಾ ಬಂದಿದ್ದರು. ಮೃತ ದಂಪತಿಗಳು ಇಬ್ಬರು ಪುತ್ರರನ್ನು, ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿದ್ದಾರೆ.

Share This
300x250 AD
300x250 AD
300x250 AD
Back to top