Slide
Slide
Slide
previous arrow
next arrow

ರಸ್ತೆಯಲ್ಲಿನ ಗುಂಡಿ ಮುಚ್ಚಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೃದ್ಧ

300x250 AD

ಕಾರವಾರ: ರಸ್ತೆಯಲ್ಲಿ ಗುಂಡಿಗಳು ಎದುರಾದರೆ ಸಾಕು, ಸರ್ಕಾರಕ್ಕೆ ಶಾಪ ಹಾಕುವವರ ಮುಂದೆ ಇಲ್ಲೊಬ್ಬ ವೃದ್ಧ ಯಾವುದೇ ಅಪೇಕ್ಷೆ ಇಲ್ಲದೇ ರಸ್ತೆ ಗುಂಡಿಗಳನ್ನು ತಾನೇ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದು, ರಸ್ತೆ ಗುಂಡಿಗಳನ್ನು ಮಣ್ಣಿನಿಂದ ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಈ ವೃದ್ಧ ಕಾರವಾರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುತ್ತಿರುವ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

ಕಾರವಾರದ ಹಬ್ಬುವಾಡ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಇದರಿಂದಾಗಿ ಪ್ರತಿ ನಿತ್ಯ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿ ಸಾವು- ನೋವುಗಳು ಸಂಭವಿಸುತ್ತಲೇ ಇವೆ. ಈ ಬಗ್ಗೆ ಸ್ಥಳೀಯರು ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಕಣ್ಣು ಮುಚ್ಚಿ ಕೂತಿದೆ. ಇದನ್ನು ಗಮನಿಸಿದ ಕಾರವಾರದ ಬಾಂಡಿಶಿಟ್ಟಾ ನಿವಾಸಿ ಜಾನ್ ಎಂಬ ವೃದ್ಧ ಸ್ವತಃ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಜಾನ್ ಅವರು ಮುಂಜಾನೆಯೇ ತಮ್ಮ ಸೈಕಲ್‌ ಏರಿ ಗುಂಡಿ ಬಿದ್ದಿರುವ ರಸ್ತೆಗೆ ತೆರಳಿ ಆ ಸೈಕಲ್‍ನನ್ನು ರಸ್ತೆಯಲ್ಲಿ ಅಡ್ಡ ನಿಲ್ಲಿಸಿ, ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಸುತ್ತಿದ್ದಾರೆ. ಜಾನ್ ಅವರು ಮನೆಯಿಂದಲೇ ಬುಟ್ಟಿ, ಗುದ್ದಲಿಗಳ ಸಮೇತ ಬಂದು ರಸ್ತೆ ಪಕ್ಕ ಸಿಗುವ ಕಲ್ಲು- ಮಣ್ಣನ್ನು ಗುಂಡಿಗೆ ತುಂಬಿ ತಾತ್ಕಾಲಿಕವಾಗಿ ರಸ್ತೆಗಳನ್ನು ದುರಸ್ತಿ ಪಡಿಸುವ ಕಾರ್ಯ ಮಾಡುತ್ತಿದ್ದಾರೆ.

300x250 AD

ಈ ವೃದ್ಧನ ಈ ನಿಸ್ವಾರ್ಥ ಸಮಾಜ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವುದೇ ಸ್ವಾರ್ಥವಿಲ್ಲದೇ, ನಿಸ್ವಾರ್ಥವಾಗಿ ವಾಹನ ಸವಾರರಿಗಾಗಿ ಅನುಕೂಲ ಮಾಡಿಕೊಡುತ್ತಿರುವ ಈ ವೃದ್ಧನ ಶ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ.

Share This
300x250 AD
300x250 AD
300x250 AD
Back to top