ಸಿದ್ದಾಪುರ: ಹುಬ್ಬಳ್ಳಿಯ ವಾಸವಿ ಮಹಲ್‌ನಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಉತ್ತರ ಕನ್ನಡ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ನ ವಿದ್ಯಾರ್ಥಿಗಳು ಭಾಗವಹಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲೆಯ ವಿದ್ಯಾರ್ಥಿಗಳಾದ ಅಲೋಕ ನಾಯ್ಕ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ, ಶ್ರೇಯಸ ಕೆ.ಎನ್. ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಥಾ ವಿಭಾಗದಲ್ಲಿ ಕಂಚಿನ ಪದಕ , ಶ್ರೀರಾಮ ರಾಜೀವ ಕಾಮತ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ, ರೂಬನ್ ಫರ್ನಾಂಡಿಸ್ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ, ಲೋಹಿತ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ, ಸಾನ್ವಿ ಚಂದ್ರ ನಾಯ್ಕ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ, ನಾಗಾರ್ಜುನ ಕಥಾ ವಿಭಾಗದಲ್ಲಿ ಕಂಚಿನ ಪದಕ, ಆಯುಷ್ ಜಿ. ಕೊಡಿಯ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ, ಪಾವನಿ ಬಿಳಗಿ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ, ಸಾಧನ ಎಸ್. ಗೌಡ ಕುಮಿಟೆ ಹಾಗೂ ಕಥಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಒಂದು ಚಿನ್ನದ ಪದಕ 5 ಬೆಳ್ಳಿ ಪದಕ 6 ಕಂಚಿನ ಪದಕ ಸೇರಿ ಒಟ್ಟೂ 12 ಪದಕಗಳ ಬೇಟೆ ಆಡಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಇವರ ಸಾಧನೆಗೆ ಉತ್ತರಕನ್ನಡ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ನ ಅಧ್ಯಕ್ಷ ಅರವಿಂದ ನಾಯ್ಕ ಕುಮಟಾ, ಉಪಾಧ್ಯಕ್ಷ ಈಶ್ವರ ನಾಯ್ಕ ಭಟ್ಕಳ ಹಾಗೂ ಕಾರ್ಯದರ್ಶಿ ಆನಂದ ಕೃಷ್ಣ ನಾಯ್ಕ ಸಿದ್ದಾಪುರ ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ReplyForward