ನವದೆಹಲಿ: ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಪ್ರಮುಖ ಉತ್ತೇಜನವಾಗಿ, ಭಾರತೀಯ ವಾಯುಪಡೆಯು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನೊಂದಿಗೆ ಇನ್ನೂ 156 ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಯೋಜಿಸುತ್ತಿದೆ ಎಂದು ಮೂಲಗಳು ವರದಿ ಮಾಡಿದೆ.
ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಪ್ರಚಂಡ ಹೆಲಿಕಾಫ್ಟರ್‌ಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದೆ, ಇದು ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಪಡೆಗಳಿಗೆ ಹೆಚ್ಚಿನ ಬಲವನ್ನು ನೀಡುತ್ತದೆ. ಎರಡೂ ಸೇನಾ ಪಡೆಗಳು ಈಗಾಗಲೇ 15 ಇಂತಹ ಹೆಲಿಕಾಫ್ಟರ್‌ಗಳನ್ನು ಖರೀದಿ ಮಾಡಿವೆ. ಕಳೆದ 15 ತಿಂಗಳುಗಳಲ್ಲಿ ವಿಶ್ವದ ಅತ್ಯಂತ ತೀವ್ರವಾದ ಹವಾಮಾನ ಪರಿಸ್ಥಿತಿಗಳು ಮತ್ತು ಭೂಪ್ರದೇಶದಲ್ಲಿ ಪ್ರಯೋಗಗಳನ್ನು ನಡೆಸಿದ ನಂತರ ಇವುಗಳನ್ನು ತಮ್ಮ ಫ್ಲೀಟ್‌ಗೆ ಸೇರಿಸಿಕೊಂಡಿವೆ.
ಭಾರತೀಯ ವಾಯುಪಡೆಯು ಜಂಟಿ ಸ್ವಾಧೀನ ಪ್ರಕ್ರಿಯೆಯಾಗಿ ಇನ್ನೂ 156 ಪ್ರಚಂಡ್ ಹೆಲಿಪಕಾಫ್ಟರ್‌ಗಳನ್ನು ಖರೀದಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
156 ಹೆಲಿಕಾಪ್ಟರ್‌ಗಳಲ್ಲಿ, 66 ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿದ್ದು, ಉಳಿದ 90 ಅನ್ನು ಭಾರತೀಯ ಸೇನೆ ಸ್ವಾಧೀನಪಡಿಸಿಕೊಳ್ಳಲಿದೆ.