• Slide
    Slide
    Slide
    previous arrow
    next arrow
  • 2  ಲಕ್ಷ ಕೋಟಿ ರೂ ವೆಚ್ಚದಲ್ಲಿ 68 ಯುದ್ಧನೌಕೆ ಮತ್ತು ಹಡಗು ಖರೀದಿಸಲಿದೆ ನೌಕಾಸೇನೆ

    300x250 AD

    ನವದೆಹಲಿ:  ಭಾರತ ಮತ್ತು ಚೀನಾ ನಡುವೆ ಭೂ ಗಡಿಯಲ್ಲಿ ಮಾತ್ರವಲ್ಲದೆ ಸಮುದ್ರದಲ್ಲೂ ಸಂಘರ್ಷದ ಸ್ಥಿತಿ ಇದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಪೈಪೋಟಿ ಏರ್ಪಟ್ಟಿರುವುದು ತಿಳಿದಿರುವ ವಿಷಯ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತ ತನ್ನ ನೌಕಾಪಡೆಯನ್ನು ಬಲಪಡಿಸುವಲ್ಲಿ ನಿರತವಾಗಿದೆ. ಭಾರತೀಯ ನೌಕಾಪಡೆಯು 68 ಯುದ್ಧನೌಕೆಗಳು ಮತ್ತು ಹಡಗುಗಳನ್ನು ಆರ್ಡರ್ ಮಾಡಿದೆ.ಅವುಗಳ ಒಟ್ಟು ವೆಚ್ಚ 2 ಲಕ್ಷ ಕೋಟಿ ರೂಪಾಯಿಗಳು.

    ಮುಂದಿನ ವರ್ಷಗಳಲ್ಲಿ ಭಾರತ ತನ್ನ ನೌಕಾಪಡೆಯನ್ನು ಬಲಪಡಿಸುವ ಗುರಿ ಹೊಂದಿದೆ. ಭಾರತೀಯ ನೌಕಾಪಡೆಯು 143 ವಿಮಾನಗಳು ಮತ್ತು 130 ಹೆಲಿಕಾಪ್ಟರ್‌ಗಳು ಮತ್ತು 132 ಯುದ್ಧನೌಕೆಗಳನ್ನು ಖರೀದಿಸಲು ಅನುಮತಿಯನ್ನು ಪಡೆದಿದೆ. ಇದಲ್ಲದೆ, 8 ಮುಂದಿನ ಪೀಳಿಗೆಯ ಕಾರ್ವೆಟ್‌ಗಳು, 9 ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ.  5 ಸಮೀಕ್ಷೆ ಹಡಗುಗಳು ಮತ್ತು 2 ಬಹುಪಯೋಗಿ ಹಡಗುಗಳನ್ನೂ ಖರೀದಿಸುವ ಬಗ್ಗೆ ಚಿಂತನೆ ನಡೆಸಿದೆ.

    300x250 AD

    ತನ್ನ ಬೃಹತ್ ಭೂತಂತ್ರದ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಚೀನಾದ ಬೆದರಿಕೆಯನ್ನು ಎದುರಿಸಲು ಬಲವಾದ ನೌಕಾ ಪಡೆಗಳನ್ನು ನಿರ್ಮಿಸುವ ಭಾರತದ ಮುಂದುವರಿದ ಅನ್ವೇಷಣೆಗೆ ಅನುಗುಣವಾಗಿ ಈ ಖರೀದಿಗಳು ನಡೆಯುತ್ತಿವೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಹೆಜ್ಜೆಗುರುತು ವಿಸ್ತರಿಸುವುದು ಭಾರತದ ಮಹತ್ವಾಕಾಂಕ್ಷೆಯಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top