Slide
Slide
Slide
previous arrow
next arrow

ಸಿದ್ದಾಪುರ ಟಿಎಸ್ಎಸ್’ಗೆ ಭೇಟಿ ನೀಡಿದ ಟಿಎಸ್ಎಸ್ ನೂತನ ಆಡಳಿತ ಮಂಡಳಿ

300x250 AD

ಸಿದ್ದಾಪುರ: ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಶಿರಸಿ ಇದರ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಗೋಪಾಲಕೃಷ್ಣ ವೆಂ. ವೈದ್ಯ ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳು ಇತ್ತೀಚೆಗೆ ಸಂಘದ ಸಿದ್ದಾಪುರ ಶಾಖೆಗೆ ಭೇಟಿ ನೀಡಿ, ಶಾಖೆಯಲ್ಲಿ ನಡೆಯುವ ಕಾರ್ಯವೈಖರಿಗಳ ಬಗ್ಗೆ ಮಾಹಿತಿಯನ್ನು ಪಡೆದರು.

ಈ ಸಂದರ್ಭದಲ್ಲಿ ಶಾಖೆಯ ಪರವಾಗಿ ಹಾಗೂ ಟಿ.ಎಮ್.ಎಸ್ ಸಿದ್ದಾಪುರ, ಬಿದ್ರಕಾನ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿಯಮಿತ, ಬಿದ್ರಕಾನ ಹಾಗೂ ಅಡಿಕೆ ವರ್ತಕರ ಸಂಘ (ರಿ), ಸಿದ್ದಾಪುರ ಇವರುಗಳಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟಿ.ಎಸ್.ಎಸ್. ನೂತನ ಆಡಳಿತ ಮಂಡಳಿ ನಿರ್ದೇಶಕರುಗಳು, ಸಿದ್ದಾಪುರ ಶಾಖೆಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top