ಕುಮಟಾ : ವಿಧಾತ್ರಿ ಅಕಾಡೆಮಿ ಸಹಭಾಗಿತ್ವದಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾದ ಬಿ.ಕೆ ಭಂಡಾರಕರ್ ಸರಸ್ವತಿ ಪದವಿಪೂರ್ವ ಕಾಲೇಜನಲ್ಲಿ ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಅಚರಿಸಲಾಯಿತು. ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳು ವಿಶೇಷ ಆಸಕ್ತಿಯಿಂದ ಸಂಘಟಿಸಿದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರುಗಳನ್ನು ಹಾಗೂ ಪ್ರತಿಯೊಬ್ಬ ಬೋಧಕೇತರ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ದಿನ ವಿಶೇಷದ ಬಗ್ಗೆ ದೀಕ್ಷಿತಾ ರೇವಣಕರ್, ಭೂಮಿಕಾ ಭಟ್ಟ ಮಾತನಾಡಿ ಕಾಲೇಜಿನ ಶಿಕ್ಷಕರ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅನನ್ಯಾ ಭಾಗವತ್, ವಿವೇಕ ಮತ್ತು ಪ್ರೇಮ್ ತಂಡ, ಗ್ರೀಷ್ಮಾ ಗಾವಡಿ ತಂಡ, ಸ್ವಾತಿ ಗಾಯ್ತೊಂಡೆ , ಜೆಸ್ಮಿನ್ ಜಗದೀಶ
ಇವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸುಜಿತ ರೇವಣಕರ್ ಸಂಗೀತ ಗಾಯನ ಮಾಡಿದರು. ಸೋನಾಲಿ ಶೇಟ್ ರಚಿಸಿದ ರಾಧಾಕೃಷ್ಣನ್ ಅವರ ಚಿತ್ರವು ಎಲ್ಲರ ಗಮನ ಸೆಳೆಯಿತು.
ಉಪನ್ಯಾಸಕ ವೃಂದದ ಪರವಾಗಿ ಚಿದಾನಂದ ಭಂಡಾರಿ, ಪದ್ಮನಾಭ ಪ್ರಭು ಹಾಗೂ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಈ ದಿನ ಶಿಕ್ಷಕರನ್ನು ಗೌರವಿಸಿದ ಹಾಗೂ ಕಾರ್ಯಕ್ರಮ ಸಂಘಟಿಸಿದ ಬಗ್ಗೆ ಸಂತಸ ಹಂಚಿಕೊಂಡರು. ಪ್ರಾಂಶುಪಾಲ ಕಿರಣ ಭಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅಕ್ಷತಾ ಶಾನಭಾಗ ತಂಡದವರು ಪ್ರಾರ್ಥಿಸಿದರು. ವಿಭಾ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪ್ರಮುಖರಾದ ಸ್ವಯಂ ಪೈ ಹಾಗೂ ಕಾಂಚಿಕಾ ನಾಯಕ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮ ಸಂಘಟಿಸಿದ್ದರು.