• Slide
    Slide
    Slide
    previous arrow
    next arrow
  • ಸೆ.11ಕ್ಕೆ ಬೆಂಗಳೂರು ಬಂದ್‌ಗೆ ರಾಜ್ಯ ಸಾರಿಗೆ ಸಂಘಗಳ ಒಕ್ಕೂಟ ಕರೆ

    300x250 AD

    ಬೆಂಗಳೂರು: ರಾಜ್ಯದಲ್ಲಿ ಜಾರಿಯಾಗಿರುವ ‘ಶಕ್ತಿ ಯೋಜನೆ’ ಜಾರಿಯಿಂದಾಗಿ ಆಟೋ ಸೇರಿದಂತೆ ಖಾಸಗಿ ವಾಹನ ಚಾಲಕರಿಗೆ ಮತ್ತು ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಅವರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆ.11ರಂದು ಬೆಂಗಳೂರು ಬಂದ್ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸಾರಿಗೆ ಸಂಘಗಳ ಒಕ್ಕೂಟವು ಕರೆ ನೀಡಿದೆ.

    ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಎಸ್.ನಟರಾಜ್ ಶರ್ಮ, ಬೆಂಗಳೂರು ಬಂದ್‌ಗೆ 32 ವಿವಿಧ ಸಮಾನ ಮನಸ್ಕ ಸಾರಿಗೆ ಸಂಘಟನೆಗಳು ಬೆಂಬಲ ನೀಡಿವೆ. ಸೆ.11ರಂದು ಆಟೋ, ಟ್ಯಾಕ್ಸಿ, ಏರ್‌ಪೋರ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಕಾರ್ಪೋರೇಟ್ ವಾಹನಗಳು ಕಾರ್ಯಚರಣೆ ಮಾಡದೆ ಬಂದ್ ಆಚಾರಿಸಲಾಗುತ್ತದೆ ಎಂದು ತಿಳಿಸಿದರು.

    ಬಂದ್ ನಡೆಸುವ ದಿನದಂದು ಮೆಜೆಸ್ಟಿಕ್ ಬಳಿಯಿರುವ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್ನವರೆಗೆ ಮೆರವಣಿಗೆಯನ್ನು ನಡೆಸಲಾಗುವುದು. ನಂತರ ಫ್ರೀಡಂ ಪರ‍್ಕ್‍ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
    ರಾಜ್ಯದಲ್ಲಿ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಬೇಕು. ಚಾಲಕರ ಆರ್ಥಿಕಾಭಿವೃದ್ಧಿಗಾಗಿ ವಿವಿಧ ಜಾತಿಯ ನಿಗಮಗಳಲ್ಲಿ ನೇರ ಸಾಲ ಸೌಲಭ್ಯದಡಿಯಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸುಲಭ ಕಂತುಗಳಲ್ಲಿ ಎರಡು ಲಕ್ಷ ರೂ. ಸಾಲ ಸೌಲಭ್ಯವನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

    300x250 AD

    ಅಕ್ರಮವಾಗಿ ಚಲಿಸುತ್ತಿರುವ ರ್ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು. ಎಲೆಕ್ಟ್ರಾನಿಕ್ ಆಟೋರಿಕ್ಷಗಳಿಗೆ ಆಟೋ ಪರವಾನಗಿಯನ್ನು ನೀಡಬೇಕು. ರ್ಯಾಪಿಡೋ, ಓಲಾ, ಉಬರ್ ಮತ್ತು ಇನ್ನಿತರ ಆನ್‍ಲೈನ್ ಕಂಪೆನಿಗಳಿಗೆ ಇ-ರಿಕ್ಷಾಗಳ ನೇರ ನೋಂದಣಿ ಮಾಡುವುದನ್ನು ನಿಷೇಧಿಸಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು.
    ಚಾಲಕರಿಗೆ ಮಾಸಿಕವಾಗಿ 10 ಸಾವಿರ ರೂ.ಗಳ ಪರಿಹಾರ ಧನವನ್ನು ನೀಡಬೇಕು. ಚಾಲಕರಿಗೆ ವಸತಿ ಯೋಜನೆ ಮತ್ತು ಕಾರು ಖರೀದಿಸಲು ಸಹಾಯಧನ ಯೋಜನೆಗಳನ್ನು ಜಾರಿ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಏಕರೂಪದ ದರ ನಿರ್ಧಾರ ಮಾಡಬೇಕು. ಚಾಲಕರ ಮಕ್ಕಳ ವಿದ್ಯಾಭ್ಯಾಸ ನೆರವಾಗುವಂತೆ ಸಹಾಯಧನವನ್ನು ನೀಡಬೇಕು ಎಂದು ಎಸ್. ನಟರಾಜ್ ಶರ್ಮ ಒತ್ತಾಯಿಸಿದರು.
    ಈಗಾಗಲೇ ನಿರ್ಧಾರವಾಗಿರುವ ಶೇ.5ರಷ್ಟು ಕಮಿಷನ್‌ಗಿಂತಲೂ ಹೆಚ್ಚು ಹಣ ಪಡೆಯುತ್ತಿರವ ಓಲಾ, ಉಬರ್, ರೆಡ್ ಬಸ್ ನಂತಹ ಆನ್‌ಲೈನ್ ಕಂಪನಿಗಳಿಗೆ ರಾಜ್ಯದಲ್ಲಿ ನಿರ್ಬಂಧವನ್ನು ಹೇರಬೇಕು. ಸರಕಾರಿ ವಾಹನಗಳಲ್ಲಿ ನಿರ್ದಿಷ್ಟ ಪ್ರಯಾಣಿಕರಿಗೂ ಅಧಿಕ ಪ್ರಯಾಣಿಕರನ್ನು ಕೊಂಡೊಯ್ಯುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
    ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಮುಖಂಡರಾದ ರಾಧಕೃಷ್ಣ ಹೊಳ್ಳ, ಜಿ.ನಾರಾಯಣಸ್ವಾಮಿ, ರಘು ನಾರಾಯಣ ಗೌಡ ಮತ್ತಿತರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top