Slide
Slide
Slide
previous arrow
next arrow

ಹರಿಗುರುಗಳ ಅನುಗ್ರಹ ಪಾತ್ರರು ಶ್ರೀ ವಿಶ್ವೋತ್ತಮ ತೀರ್ಥರು: ಸೋದೆ ಶ್ರೀ ‌ಸ್ಮರಣೆ

300x250 AD

ಶಿರಸಿ: ಮನುಷ್ಯನು ತನ್ನ ಅಂತ್ಯಕಾಲದಲ್ಲಿ ಭಗವಂತನ ಸ್ಮರಣೆಯನ್ನು ಮಾಡಿದರೆ ಭಗವಂತನಂತೆ ಚಿನ್ಮಯ ಶರೀರವನ್ನು ಪಡೆಯಬಹುದು. ಇಂತಹ ಹರಿಗುರುಗಳ ದೊಡ್ಡ ಅನುಗ್ರಹವನ್ನು ಸಂಪಾದಿಸಿದವರು ಶ್ರೀ ವಿಶ್ವೋತ್ತಮ ತೀರ್ಥರು ಎಂದು‌ ಉಡುಪಿ‌ ಅಷ್ಟ ಮಠಗಳಲ್ಲಿ ಒಂದಾದ ಸೋದೆ‌ ವಾದಿರಾಜ‌ ಮಠಾಧೀಶ ಶ್ರೀವಿಶ್ವ ವಲ್ಲಭ ತೀರ್ಥ ಶ್ರೀಪಾದರು ಬಣ್ಣಿಸಿದರು.

ಅವರು ಸೋದೆ ಮಠದಲ್ಲಿ ಶ್ರೀವಿಶ್ವೋತ್ತಮ ತೀರ್ಥರ 16ನೇ ಆರಾಧನಾ ಪ್ರಯುಕ್ತ ಶ್ರೀಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂವಾದದ ಬಳಿಕ ಆರಾಧನಾ ಸಂದೇಶ ನೀಡಿದರು.

300x250 AD

ಮನುಷ್ಯ ಅಂತ್ಯಕಾಲದಲ್ಲಿ ಯಾವ ಸ್ಮರಣೆಯಿಂದ ದೇಹತ್ಯಾಗ ಮಾಡುವನೋ ಮುಂದೆಯೂ ಅದೇ ಭಾವವನ್ನು ಹೊಂದುವನು ಎಂದು ಶ್ರೀಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಇದಕ್ಕೆ ಉದಾಹರಣೆ ಭಾಗವತದಲ್ಲಿ ಬರುವ ಭರತ ಚಕ್ರವರ್ತಿಯ ಕಥೆ . ವೈರಾಗ್ಯ ಭಾವ ತಾಳಿ ಭರತನು ಎಲ್ಲವನ್ನೂ ತ್ಯಾಗ ಮಾಡಿ ತಪಸ್ಸು ಮಾಡಲು ಗಂಡಕೀ ತೀರಕ್ಕೆ ಬಂದರೆ ಅಲ್ಲಿ ಜಿಂಕೆ ಮರಿಯ ಸಂಗವಾಗಿ ಅದರಿಂದ ಮೋಹಿತನಾಗಿ ತನ್ನ ಅಂತ್ಯಕಾಲದಲ್ಲೂ ಜಿಂಕೆಯ ಸ್ಮರಣೆಯನ್ನೇ ಮಾಡಿದ ಫಲವಾಗಿ ಮುಂದಿನ ಜನ್ಮದಲ್ಲಿ ಜಿಂಕೆಯಾಗಿಯೇ ಹುಟ್ಟಿದ ಎಂದರು. ಇಂಥ ಕಾರಣಗಳಿಗೆ ಮನುಷ್ಯ ಅಂತ್ಯಕಾಲದಲ್ಲಿ ಭಗವಂತನ ನಾಮಸ್ಮರಣೆಯನ್ನು ಮಾಡಬೇಕು ಎಂದು ಶಾಸ್ತ್ರಗಳು ಸಾರಿವೆ. ವಿಶ್ವೋತ್ಥಮ ತೀರ್ಥರಂಥವರ ದರ್ಶನ ಭಾಗ್ಯವೇ ನಮ್ಮ ಜೀವನದ ಸುಕೃತ ಎಂದರು.
ಇದಕ್ಕೂ‌ ಮುನ್ನ ವಿದ್ವಾಂಸರಾದ‌‌ ನಿಪ್ಪಾಣಿ ಗುರುರಾಜ ಆಚರ್ಯರು ಗುರು ಸ್ಮರಣೆ ಮಾಡಿದರು. ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳು, ಮಧುಸೂದನ ಪುತ್ರಾಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top