ಹೊನ್ನಾವರ: ವಾತಾವರಣದಲ್ಲಿ ಕಾರ್ಬನ್ ನಿಯಂತ್ರಿಸುವಲ್ಲಿ ಕಾಂಡ್ಲವನ ಪ್ರಮುಖ ಪಾತ್ರ ವಹಿಸಲಿದೆ ಎಂದು ಉಪಸಂರಕ್ಷಣಾಧಿಕಾರಿ ರವಿಶಂಕರ್ ಸಿ. ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ಅಂತರಾಷ್ಟ್ರೀಯ ಮ್ಯಾಂಗ್ರೋವ್ ಸಂರಕ್ಷಣಾ ದಿನದ ಅಂಗವಾಗಿ ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಅರಣ್ಯ ಇಲಾಖೆ ,ಕೆನರಾ ಅರಣ್ಯ ವೃತ್ತ ,ಕಾಲೇಜಿನ ಐಕ್ಯೂಎಸಿ ಮತ್ತು ಬಯೋಕ್ಲಬ್ ಇದರ ಸಹಯೋಗದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಂಡ್ಲಾ ಅರಣ್ಯವನ್ನು ರಕ್ಷಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವು ಮೂಖ್ಯವಾಗಿದೆ. ವಾತವರಣದಲ್ಲಿನ ಕಾರ್ಬನ್ ಅಂಶವನ್ನು ಈ ಮರಗಳು ಹೆಚ್ಚಾಗಿ ಹಿಡಿದಟ್ಟುಕೊಳ್ಳುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕಾಂಡ್ಲಾವನ ಇರುವುದು ಅಘನಾಶಿನಿ ನದಿಯಲ್ಲಿ ಎಂದು ವಿದ್ಯಾರ್ಥಿಗಳಿಗೆ ಕಾಂಡ್ಲಾವನದ ಕುರಿತು ಮಾಹಿತಿ ನೀಡಿದರು. ಕರಾವಳಿಯಲ್ಲಿ ಮೀನುಗಾರಿಕೆಯು ಹಲವು ಕುಟುಂಬದ ಜೀವನದ ಆಸರೆಯಾಗಿದ್ದು, ಕಾಂಡ್ಲವನದಿ0ದ ಮೀನುಗಳ ಸಂತಾನೋತ್ಪತ್ತಿಗೂ ಅನೂಕೂಲವಾಗಿದೆ.
ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ಕಾಂಡ್ಲಾವನದ ಬಗ್ಗ ಜಾಗೃತಿಯನ್ನು ಮೂಡಿಸುದು ಒಳ್ಳೆಯ ನಿರ್ಧಾರವಾಗಿದೆ. ಸಮಾಜದಲ್ಲಿ ಬದಲಾವಣೆ ತರಬೇಕಾದರೆ ವಿದ್ಯಾರ್ಥಿಗಳ ಪಾತ್ರ ದೊಡ್ಡದಿದೆ ವಿದ್ಯಾರ್ಥಿಗಳು ಇದರ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದರು.
ಸಾಗರ ತಾಲೂಕಿನ ಇಂದಿರಾಗಾoಧಿ ಸರ್ಕಾರಿ ಮಹಿಳೆಯರ ಪ್ರಥಮ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ||ಶಿವಾನಂದ ಭಟ್, ಹಾಗೂ ಸೆಂಟರ್ ಫಾರ್ ಇಕೋಲಾಜಿಕಲ್ ಸೈನ್ಸಸ್ ಭಾರತೀಯ ವಿಜ್ಞಾನ ಸಂಸ್ಥೆ ಸಲಹೆಗಾರ ವಿಜ್ಞಾನಿ ಡಾ|| ಎಂ.ಡಿ.ಸುಭಾಶ್‌ಚoದ್ರನ್ ಕಾಂಡ್ಲವನದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪಿ.ಎಂ.ಹೊನ್ನಾವರ ಮಾತನಾಡಿ ಕಾಂಡ್ಲವನ ಸಂರಕ್ಷಣೆಯ ಪ್ರಾಜೆಕ್ಟ್ ಯುನೆಸ್ಕೋದಿಂದ ಆಗುತ್ತಿದೆ. 124 ದೇಶಗಳಲ್ಲಿ ಕಾಂಡ್ಲವನದ ಮಹತ್ವದ ಬಗ್ಗೆ ಅರಿವನ್ನು ಮುಡಿಸುವ ಕೆಲಸ ನಡೆಯುತ್ತಿದೆ. ಕಾಂಡ್ಲಾವನದ ಸಂರಕ್ಷಣೆಯನ್ನು ರಾಷ್ಟ್ರೀಯ ಭದ್ರತೆಯ ಅಡಿಯಲ್ಲಿ ತಂದರೆ ಒಳ್ಳೆಯದು ಎಂದರು.
ಮ್ಯಾಂಗ್ರೋಮ್ ಸಂರಕ್ಷಣಾ ದಿನದ ಅಂಗವಾಗಿ ನಡೆದ ರಸಪ್ರಶ್ನೆ,ಭಾಷಣ, ಛಾಯಚಿತ್ರ ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ವೇಳೆ ಪ್ರಶಸ್ತ್ರಿ ವಿತರಿಸಲಾಯಿತು. ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ಗೌಡ ಸ್ವಾಗತಿಸಿ, ಉಪಸಂರಕ್ಷಣಾಧಿಕಾರಿ ಲೋಹಿತ್ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕರಾದ ಎಂ.ಜಿ.ಹೆಗಡೆ ವಂದಿಸಿ ದಿವ್ಯಾ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.