• Slide
    Slide
    Slide
    previous arrow
    next arrow
  • ಎಲ್ಲ ರಾಜಕಾರಣಿಗಳಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಾಧ್ಯವಿಲ್ಲ: ಮಂಕಾಳ ವೈದ್ಯ

    300x250 AD

    ಹೊನ್ನಾವರ: ಯೋಗ್ಯತೆ ಇಲ್ಲದ ರಾಜಕಾರಣಿಗಳಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಾಧ್ಯವಿಲ್ಲ. ಈಗ ಜಾಗ ಹುಡುಕಿ ಕ್ಯಾಂಟೀನ್ ನಿರ್ಮಾಣ ಮಾಡುತ್ತೇವೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಮಂಜೂರಿ ಆಗಿದೆ. ಹಣ ಕೂಡ ಇದೆ. ಆದರೆ ಯೋಗ್ಯತೆ ಇಲ್ಲದಿರುವುದರಿಂದ ಹೇಗೆ ನಿರ್ಮಾಣ ಆಗಲು ಸಾಧ್ಯ? ಅದನ್ನು ತಕ್ಷಣ ಪ್ರಾರಂಭ ಮಾಡಿ ಸಾಮಾನ್ಯ ಜನರಿಗೆ, ಬಡವರಿಗೆ ಅದರ ಪ್ರಯೋಜನ ಸಿಗುವ ಹಾಗೆ ಅವರಿಗೆ ತಲುಪುವ ವ್ಯವಸ್ಥೆ ಮಾಡುತ್ತೇನೆ ಎಂದರು.

    300x250 AD

    ನಾವು ಬಡವರ ಪರವಾಗಿ ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಊಟ ಕೊಡುತ್ತೇವೆ. ಯಾರೋ ಬೇರೆ ಬೇರೆ ಊರಿನಿಂದ, ಹಳ್ಳಿಯಿಂದ ಪಟ್ಟಣಕ್ಕೆ ಬಂದು ಒಂದು ಊಟ ಮಾಡಿಕೊಂಡು ಸಂಜೆಯವರೆಗೆ ಅವರ ಕೆಲಸ ಮಾಡಿಕೊಂಡು ಹೋಗಬೇಕು ಎನ್ನುವ ಉದ್ದೇಶದಿಂದ ನಮ್ಮ ಸರ್ಕಾರ ಇದ್ದಾಗ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಮಧ್ಯವರ್ತಿ ಸ್ಥಳ ಗುರುತಿಸಿ ಆಸ್ಪತ್ರೆ, ತಹಶೀಲ್ದಾರ್ ಕಚೇರಿ ಅಥವಾ ಬಸ್ ನಿಲ್ದಾಣ ಹತ್ತಿರ ಮಾಡಿದರೆ ತಾಲೂಕಿನ ಎಲ್ಲ ಹಳ್ಳಿಗಳಿಂದ ಬರುವ ಎಲ್ಲರಿಗು ಅನುಕೂಲವಾಗುತ್ತದೆ ಎಂದರು.

    Share This
    300x250 AD
    300x250 AD
    300x250 AD
    Leaderboard Ad
    Back to top