ಸಿದ್ದಾಪುರ: ಮಾದಕ ವಸ್ತುಗಳ ಸೇವನೆ ಹಾಗೂ ಸಾಗಾಣಿಕೆ ಮಾಡಿದವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಿಸಲಾಗುವದು. ಯುವಜನತೆ ಇಂತಹ ದುಶ್ಚಟಗಳಿಂದ ದೂರವಿರಬೇಕು.ಮಾದಕ ವಸ್ತುಗಳ ಸೇವನೆಯಿಂದ ಅರೋಗ್ಯದ ಜೊತೆಗೆ ಸಮಾಜದ ಸ್ವಾಸ್ತ್ಯ ಕೂಡ ಹಾಳಾಗುತ್ತಿದೆ ಎಂದು ಪಿಎಸೈ ಮಹಾಂತಪ್ಪ ಕುಂಬಾರ ಹೇಳಿದರು.
ಅವರು ತಾಲೂಕಿನ ಕವಂಚೂರು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಜೂನ್-26 ಅಂತಾರಾಷ್ಟ್ರೀಯ ಮಾದಕ ವಸ್ತು ಬಳಕೆ ಮತ್ತು ಸಾಗಣೆ ವಿರೋದಿ ದಿನ ಅಂಗವಾಗಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ವೇಳೆಯಲ್ಲಿ ಮಕ್ಕಳಿಗೆ ಸಾಮಾಜಿಕ ಜಾಲತಾಣದಿಂದ ಆಗುವಂತಹ ಅನುಕೂಲತೆ ಹಾಗೂ ಅನಾನುಕೂಲತೆಯ ಬಗ್ಗೆ ತಿಳಿಸಿದರು.
ಸೈಬರ್ ಕ್ರೈಂ ಬಗ್ಗೆ ಆಗುವಂತಹ ಪ್ರಕರಣಗಳ ಬಗ್ಗೆ ಮತ್ತು ವಿದ್ಯಾರ್ಥಿ ಜೀವನದಲ್ಲಿ ಆಗುವಂತಹ ಮೋಸಗಳು ಬಗ್ಗೆ ತಿಳಿಸಿದರು. ಈ ವೇಳೆಯಲ್ಲಿ ಶಾಲೆಯ ಮುಖ್ಯಪಾಧ್ಯಾಯ ವೀರಣ್ಣ ನೂರದನವರ, ಶಿಕ್ಷಕರಾದ ಯೋಗೇಶ ನಾಯ್ಕ, ಸತ್ಯನಾರಾಯಣ ವೇರ್ಣೇಕರ್, ದೀಪಾ, ಶ್ವೇತಾ,ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ನಾಯ್ಕ ಹಾಜರಿದ್ದರು.
ಮಾದಕ ವಸ್ತುಗಳ ಸೇವನೆಯಿಂದ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ: ಎಂ.ಜಿ.ಕುಂಬಾರ
