• Slide
    Slide
    Slide
    previous arrow
    next arrow
  • ಇಸಳೂರು ಪ್ರೌಢಶಾಲೆಯಲ್ಲಿ ಶಿಕ್ಷಣಾಭಿಮಾನಿ ಪ್ರಭಾಕರರಾವ್’ಗೆ ಸನ್ಮಾನ

    300x250 AD

    ಶಿರಸಿ: ತಾಲೂಕಿನ ಸರಕಾರಿ ಪ್ರೌಢಶಾಲೆ ಇಸಳೂರಿನಲ್ಲಿಇತ್ತೀಚೆಗೆ ಶಿಕ್ಷಣಾಭಿಮಾನಿ ಪ್ರಭಾಕರರಾವ್ ಮಂಗಳೂರು ಹಾವೇರಿ ಇವರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು. ರೂ. 60,000/- ಮೌಲ್ಯದ ವಸ್ತುಗಳನ್ನು ಶಾಶ್ವತ ವಸ್ತುಗಳಾದ ಪ್ರಯೋಗಾಲಯಕ್ಕೆ ವಿದ್ಯುತ್ ಸಂಪರ್ಕ, ಪ್ರತಿ ತರಗತಿಗೂ ಗ್ರೀನ್ ಬೋರ್ಡ, ನೀಡಿ ಶೈಕ್ಷಣಿಕ ಸೌಲಭ್ಯ ಒದಗಿಸಿ ಕೊಟ್ಟ ಮಹಾನ್ ವ್ಯಕ್ತಿ ಸನ್ಮಾನಿತರಾಗಿ ತಮ್ಮ ಅನಿಸಿಕೆಯಲ್ಲಿ ವ್ಯಕ್ತಪಡಿಸಿದ ಸಂಗತಿಗಳು ನಿಜಕ್ಕೂ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿತ್ತು.

    ತಮ್ಮ ವೈಯಕ್ತಿಕ ಬದುಕಿನ ಕಷ್ಟಗಳನ್ನು ತೆರೆದಿಟ್ಟ ಇವರು ಶಿಕ್ಷಣ ಕ್ಷೇತ್ರಕ್ಕೆ ದಾನ ಮಾಡಲು ಸ್ಪೂರ್ತಿ ತನ್ನ ಪಿತಾಜಿಯವರು ಎಂದು ತಿಳಿಸಿದರು. 1936ನೇ ಸಾಲಿನಲ್ಲಿ ತನ್ನ ತಂದೆ ಮಂಗಳೂರಿನಿಂದ ವಲಸೆ ಬಂದು ರಾಣೆಬೆನ್ನೂರಿನಲ್ಲಿ ಸೈಕಲ್ ರಿಪೇರಿ ಕಾರ್ಯಮಾಡಿ ಅಲ್ಪ ಸ್ವಲ್ಪ ಸಂಗ್ರಹಿತ ಹಣದಲ್ಲಿ 1956ನೇ ಸಾಲಿನಲ್ಲಿ ತಾನು ಕಲಿತ ಶಾಲೆ ವಿದ್ಯಾದಾಯಿನಿ ಪ್ರೌಢಶಾಲೆ ಸುರತ್ಕಲ್‌ಗೆ ರೂ. 2000/- ದೇಣಿಗೆ ನೀಡಿದ್ದು ಸ್ಮರಿಸಿದರು. ಆ ಕಾಲದಲ್ಲಿ 10 ಗ್ರಾಂ ಚಿನ್ನದ ಬೆಲೆ 40 ರೂಪಾಯಿ ಮಾತ್ರ. ಅಂತಹ ಕಾಲದಲ್ಲಿ ತನ್ನ ತಂದೆ ಶಿಕ್ಷಣ ಸಂಸ್ಥೆಗೆ ನೀಡಿದ ಮೊತ್ತದ ಮೌಲ್ಯ ಈ ಕಾಲದಲ್ಲಿ ಎಷ್ಟಿರಬಹುದು. ತಂದೆಯೊಟ್ಟಿಗೆ ಅಂಗಡಿಯಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ಪೈಸೆ, ಬಿಲ್ಲಿ ಕಾಲವಾಗಿತ್ತು. 50 ಪೈಸೆಯ ಕೊಟ್ಟಿ ನಾಣ್ಯಗಳನ್ನು ಯಾವುದೋ ಗ್ರಾಹಕ ನೀಡಿದ್ದು ಆ ನಾಣ್ಯವನ್ನು ಪ್ರಭಾಕರ ರಾವ್ ಮಂಗಳೂರು ಬೇರೊಂದು ಗ್ರಾಹಕನಿಗೆ ವರ್ಗಾಯಿಸಲು ಮುಂದಾದಾಗ ಅವರ ತಂದೆ ಮಗನಿಗೆ 50 ಪೈಸೆ ಕೊಟ್ಟಿ ನಾಣ್ಯವನ್ನು ಎದುರಿನ ಬಾವಿಯಲ್ಲಿ ಬೀಸಾಡಲು ತಿಳಿಸಿದರಂತೆ. ಕಾರಣ ನಾವು ಒಬ್ಬ ವ್ಯಕ್ತಿಗೆ ಮೋಸ ಮಾಡಿ ವರ್ಗಾಯಿಸಿದಲ್ಲಿ ಇನ್ನೊಬ್ಬ ಇನ್ನೊಬ್ಬನಿಗೆ ವರ್ಗಾಯಿಸುತ್ತಾನೆ. ಈ ಸರಪಳಿ ತುಂಡರಿಸಲು ಬಾವಿಯಲ್ಲಿ ಬೀಸಾಡಲು ತಿಳಿಸಿದರಂತೆ. ಈ ಮೌಲ್ಯವನ್ನು ಅವರ ಜೀವನದಲ್ಲಿ ರೂಢಿಸಿಕೊಂಡರೆಂಬ ಕಥೆಯನ್ನು ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟರು.

    300x250 AD

    ಇವರ 17ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಆಗ ವ್ಯವಹಾರ ಪ್ರಾರಂಭಿಸಿದ ಇವರು ಕ್ರಮೇಣ ಹಾವೇರಿಯಲ್ಲಿ ಪೈಪ್ ಅಂಗಡಿ ನಿರ್ಮಿಸಿ ಈಗ ಹಾವೇರಿಯಲ್ಲಿ ಪ್ರತಿಷ್ಠಿತ ಹಲವಾರು ಜನರಿಗೆ ಉದ್ಯೋಗ ನೀಡುವ ಮಳಿಗೆಯನ್ನು ಹೊಂದಿದ್ದಾರೆ. ಕಳೆದ 15 ವರ್ಷಗಳಿಂದ ಪ್ರತಿ ವರ್ಷವೂ ಡಿಸೆಂಬರ್ ಅಂತ್ಯಕ್ಕೆ ಹಾವೇರಿಯಿಂದ ಮೊದಲು 7 ರಿಂದ 8 ಜನರ ತಂಡ ಇವರ ನೇತೃತ್ವದಲ್ಲಿ ಸೋಂದಾ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಮಾಡುತ್ತಿದ್ದು ಈಗ ಈ ತಂಡ 70 ರಿಂದ 80 ಜನರ ತಂಡವಾಗಿದ್ದು ಇಸಳೂರಿನ ಗ್ರಾಮದಲ್ಲಿ ವಾಸ್ತವ್ಯ ಒಂದು ದಿನ ಇರುತ್ತದೆ. ಈ ವಾಸ್ತವ್ಯಕ್ಕೆ ಸರಕಾರಿ ಪ್ರೌಢ ಶಾಲೆಯನ್ನು ಆಯ್ಕೆ ಮಾಡಿಕೊಂಡ ಪಾದ ಯಾತ್ರೆ ತಂಡ ಈ ಶಾಲೆಯ ಸೌಂದರ್ಯ, ಸ್ವಚ್ಛತೆ, ಸೌಕರ್ಯಗಳಿಗೆ ಮೆಚ್ಚಿ ಶೈಕ್ಷಣಿಕ ಮೂಲ ಸೌಕರ್ಯಕ್ಕೆ ತನ್ನ ಕೊಡುಗೆಯನ್ನು ನೀಡಿ ಸಹಕರಿಸಿದ್ದಕ್ಕೆ ಶಾಲಾಭಿವೃದ್ಧಿ ಸಮಿತಿ, ಪಾಲಕರು, ಊರ ನಾಗರೀಕರು ಶಿಕ್ಷಕ ವೃಂದ ಚಿರಋಣಿಯಾಗಿದ್ದಾರೆ. ಇವರ ಜೀವನ ಕಥನ, ಉದಾರ ಮನಸ್ಸು ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಪೂರ್ತಿದಾಯಕವಾಗಿದ್ದು ಒಬ್ಬ ವ್ಯಕ್ತಿಯ ಶ್ರದ್ಧೆ ಕರ್ತವ್ಯ ಆತನನ್ನು ಉನ್ನತ ಮಟ್ಟಕ್ಕೆ ಒಯ್ಯುತ್ತದೆ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top