• Slide
  Slide
  Slide
  previous arrow
  next arrow
 • ಬಿಸಲಕೊಪ್ಪ ಪ್ರೌಢಶಾಲೆಯಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಹೆಬ್ಬಾರ್

  300x250 AD

  ಶಿರಸಿ: ಇತ್ತೀಚಿಗೆ ತಾಲೂಕಿನ ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಶಾಸಕರ ನಿಧಿಯಲ್ಲಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸುವ ಮೂಲಕ ಮಕ್ಕಳಿಗೆ ಅರ್ಪಿಸಿದರು.

  ಇದೇ ವೇಳೆ ವಿದ್ಯಾ ಸಂಸ್ಥೆಯ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ತದನಂತರ ಮಾತನಾಡಿದ ಶಿವರಾಮ್ ಹೆಬ್ಬಾರ್, ಶ್ರೀ ಸೂರ್ಯನಾರಾಯಣ ವಿದ್ಯಾಸಂಸ್ಥೆಯು ಉತ್ತಮ ಕೆಲಸವನ್ನು ಮಾಡುತ್ತಿದ್ದು ನೀಡಿದ ಎಲ್ಲಾ ಅನುದಾನಗಳನ್ನು ಸದ್ವಿನಿಯೋಗ ಮಾಡಿಕೊಂಡಿದ್ದು ಸಂತೋಷದಾಯಕ ಎಂದರು. ಅಲ್ಲದೆ ಮಕ್ಕಳು ಶುದ್ಧ ನೀರು, ಆಹಾರಗಳನ್ನು ಸೇವಿಸಿ ಉತ್ತಮವಾಗಿ ಅಭ್ಯಾಸವನ್ನು ಮಾಡಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಸಮಾಜದ ಉತ್ತಮ ಪ್ರಜೆಯಾಗಬೇಕು ಎಂದರು.

  300x250 AD

  ತದನಂತರ ಬಿಸಲಕೊಪ್ಪ ಭಾಗದ ಜನರಿಂದ ಸನ್ಮಾನ ನಡೆಯಿತು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್ಎಂ ಹೆಗಡೆ ಹುಡೆಲಕೊಪ್ಪ ಹಾಗೂ ಉಪಾಧ್ಯಕ್ಷರಾದ ಪ್ರಭಾಕರ್ ಹೆಗಡೆ ಕಾರ್ಯದರ್ಶಿಗಳಾದ ಶ್ರೀಧರ್ ನಾಯಕ ಮುಖ್ಯೋಪಾಧ್ಯಾಯದ ಗಣೇಶ್ ಭಟ್ಟ ವಾನಳ್ಳಿ ಹಾಗೂ ಶಿಕ್ಷಕರು  ಪದಾಧಿಕಾರಿಗಳು ಊರ ಗಣ್ಯ ಮಾನ್ಯರು ಹಾಜರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top