ಭಟ್ಕಳ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಂಗಳವಾರ ಒಂದೇ ದಿನ ಹತ್ತಕ್ಕೂ ಹೆಚ್ಚು ದಾರಿಹೋಕರ ಮೇಲೆ ದಾಳಿ ನಡೆಸಿ ತೀವ್ರತರಹದಲ್ಲಿ ಗಾಯಗೊಳಿಸಿದೆ.
ಮದೀನಾ ಕಾಲೋನಿಯಲ್ಲಿ ನಾಯಿಯೊಂದು ಐವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ದಾಳಿ ನಡೆಸಿರುವ ನಾಯಿ ಹುಚ್ಚು ನಾಯಿಯೋ, ಬೀದಿ ನಾಯಿನೋ ಎಂಬುದು ಖಾತ್ರಿಯಾಗಿಲ್ಲ. ಅಲ್ಲದೆ, ಹೆಬಳೆ ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರಿಗೆ, ಹಡೀನ್, ಸರ್ಪನಕಟ್ಟೆ ಹಾಗೂ ಬದ್ರಿಯಾ ಕಾಲೋನಿಯಲ್ಲಿ ತಲಾ ಒಬ್ಬರಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ.
ನಾಯಿ ದಾಳಿಗೆ ಒಳಗಾದವರನ್ನು ಜೀವನ್ ನಾಯ್ಕ, ಮಹಮ್ಮದ್ ಇದ್ರೀಸ್, ಫಿರ್ದೋಶ್ ಬಾನು, ಮಹಮ್ಮದ್ ಫಾರೂಖ್, ಫರೀದಾ ಬಾನು ಜಾಲಿ, ಕೌಸರ್ ಮದೀನಾ ಕಾಲನಿ, ಮಹಮ್ಮದ್ ಇರ್ಷಾದ್, ಮಹಮ್ಮದ್ ಅನ್ಸಾರ್, ಅಂಜು0 ಎಂದು ಗುರುತಿಸಲಾಗಿದೆ.
ನಾಯಿ ದಾಳಿ ಸುದ್ದಿಗೆ ಭಟ್ಕಳದ ಜನರು ಭಯಬೀತರಾಗಿದ್ದು, ಒಂದೇ ದಿನದಲ್ಲಿ ಹತ್ತಕ್ಕು ಹೆಚ್ಚು ಜನರ ಮೇಲೆ ನಾಯಿಗಳು ದಾಳಿ ನಡೆಸಿದ್ದು ಇದು ಹುಚ್ಚು ನಾಯಿಗಳ ಹಾವಳಿ ಆಗಿರಬಹುದು ಎಂದು ಅನುಮಾನಿಸಲಾಗಿದೆ.