ಜೊಯಿಡಾ: ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ ಮತ್ತು ಐತಿಹಾಸಿಕವಾಗಿ ರಾಜ್ಯದಲ್ಲಿಯೇ ಸಂಪದ್ಭರಿತ ತಾಲೂಕು. ಇಲ್ಲಿನ ವಿದ್ಯಾರ್ಥಿಗಳು ಭಾಗ್ಯವಂತರು ಎಂದು ಸಾಹಿತಿ, ಅಂಕಣಕಾರ ದಾಂಡೇಲಿಯ ಆರ್.ಜಿ.ಹೆಗಡೆ ಹೇಳಿದರು.
ಪ್ರಥಮ ದರ್ಜೆ ಕಾಲೇಜನ ವಿದ್ಯಾರ್ಥಿಗಳು, ಕಸಾಪ ಹಮ್ಮಿಕೊಂಡ ಕಥೆ ಕಟ್ಟುವ ಕುರಿತು ಕಥನಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಆರ್ಥಿಕ ಮೂಲಕ್ಕೆ ಯಾವುದೇ ತಾರತಮ್ಯ ಇಲ್ಲ ಕಲಿಕೆಯಲ್ಲಿ ಪ್ರೀತಿ, ಮಾನವೀಯತೆ ಸಾಧನೆ ಇರಬೇಕು. ಒಂದು ಉತ್ತಮ ಸಾಹಿತ್ಯ ,ಕೃತಿ ಕವಿತೆಗಳ ಸಾಲು ಮನುಷ್ಯನ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ತರಬಲ್ಲದು ಎಂದು ಮಾರ್ಮಿಕವಾಗಿ ಮಾತನಾಡಿದರು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಬಿ.ಎನ್. ವಾಸರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೊಠಡಿಯೊಳಗಿನ ಕಲಿಕೆ ಜೀವನವನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಓದು ಬರಹ ನಮ್ಮ ಜೀವನದ ಭಾಗವಾಗಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯ ರಚನೆಯ ಅಭಿರುಚಿ ಮೂಡಿ ಬರಬೇಕಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಅಂಜಲಿ ರಾಣೆ , ಕನ್ನಡ ವಿಭಾಗದ ಮುಖ್ಯಸ್ಥೆ ಡಾ ಶೈಲಜಾ ಕಸಾಪ ತಾಲೂಕಾ ಅಧ್ಯಕ್ಷ ಪಾಂಡುರAಗ ಪಟಗಾರ, ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯಕ , ಪ್ರಾಧ್ಯಾಪಕ ರಾಘವೇಂದ್ರ ಸೇರಿದಂತೆ ಹಲವಾರು ಗಣ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.