• Slide
    Slide
    Slide
    previous arrow
    next arrow
  • ಕೊಂಡ್ಲಿ ಹೋಬಳಿ ಮಟ್ಟದ ಪಿಡಿಓಗಳ ಸಭೆ

    300x250 AD

    ಸಿದ್ದಾಪುರ: ತಾಲೂಕಿನ ಕೋಲಶಿರ್ಸಿ ಗ್ರಾಮ ಪಂಚಾಯತ ಸಭಾಭವನದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ ವಿ.ರಾವ್ ಕೊಂಡ್ಲಿ ಹೋಬಳಿಯ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದರು. ಕುಡಿಯುವ ನೀರಿನ ಸಮಸ್ಯೆಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

    ಶಾಲೆ ಹಾಗೂ ಸಾರ್ವಜನಿಕರಿಗೆ ಕುಡಿಯವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಗೆ ವಹಿಸುವಂತೆ ತಿಳಿಸಲಾಯಿತು. ಸ್ಥಳೀಯವಾಗಿ ಇರುವ ನೀರಿನ ಮೂಲವನ್ನು ಸರಿಯಾದ ಸ್ಥಿತಿಯಲ್ಲಿ ಇಟ್ಟು ನೀರು ಪೂರೈಕೆ ಮಾಡುವಂತೆ ಸೂಚಿಸಲಾಯಿತು. ಅಗತ್ಯವಿದ್ದರೆ ಸ್ಥಳೀಯರ ಬಾವಿ, ಬೊರವೆಲ್‌ಗಳಿಂದ ನೀರನ್ನು ಪಡೆದುಕೊಳ್ಳುವಂತೆ ಮತ್ತು ಟ್ಯಾಂಕರ್ ಮೂಲಕವು ನೀರನ್ನು ಪುರೈಕೆ ಮಾಡುವುದಕ್ಕೆ ಇರುವ ಅವಕಾಶಗಳ ಬಗ್ಗೆ ತಿಳಿಸಲಾಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top