ಹಳಿಯಾಳ: ಪಟ್ಟಣದ ಶಿವಾಜಿ ಪದವಿ ಪೂರ್ವ ಮಹಾ ವಿದ್ಯಾಲಯದ ಮತ್ತು ಇಲ್ಲಿನ ಕುಸ್ತಿ ಹಾಸ್ಟಲ್ ನ ವಿದ್ಯಾರ್ಥಿನಿ ಆಗಿರುವ ಕುಮಾರಿ ಪ್ರಿನ್ಸಿಟಾ ಪೇದ್ರು ಸಿದ್ದಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ಜೂನ್ 6ರಿಂದ 10ರವರೆಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ, ಪದವಿಪೂರ್ವ ಮಹಾವಿದ್ಯಾಲಯಗಳ 66ನೇ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯ 59 ಕೆಜಿ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಪ್ರಿನ್ಸಿಟಾ ಸಿದ್ದಿ ದ್ವಿತೀಯಾ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡಿದ್ದಾಳೆ.
ತಾಲೂಕಿನ ಗಾಡಗೇರ ಗ್ರಾಮದ ಪೇದ್ರು ಪಾಸ್ಕಲ್ ಸಿದ್ಧಿ ಮತ್ತು ಜೂಲಿಯಾನ ಪೇದ್ರು ಸಿದ್ಧಿ ದಂಪತಿಗಳ ಪುತ್ರಿ ಆಗಿರುವ ಪ್ರಿನ್ಸಿಟಾಗೆ ಕುಸ್ತಿ ಹಾಸ್ಟಲ್‌ನ ಕೋಚ್ ತುಕಾರಾಮ್ ಪಾಟೀಲ್ ಮಾರ್ಗದರ್ಶನ ಮಾಡಿದ್ದಾರೆ.
ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ: ಬೆಳ್ಳಿ ಪದಕ ಪಡೆದ ಜಿಲ್ಲೆಯ ಪ್ರಿನ್ಸಿಟಾ
