• Slide
    Slide
    Slide
    previous arrow
    next arrow
  • ನಿರ್ಮಲಾ‌ ಗೋಳಿಕೊಪ್ಪ ಬರೆದ ‘ಅಗ್ನಿಸಂಭವೆ’ ಬಿಡುಗಡೆ

    300x250 AD

    ಶಿರಸಿ: ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಶ್ರೀಗಳವರು ನಿರ್ಮಲಾ ಹೆಗಡೆ ಗೋಳಿಕೊಪ್ಪ ರಚಿಸಿದ ‘ಅಗ್ನಿಸಂಭವೆ’ ಪ್ರಸಂಗ ಪುಸ್ತಕವನ್ನು ಬಿಡುಗಡೆ ಮಾಡಿದರು.

    ಅಂಬಾತನಯ ಮುದ್ರಾಡಿ ಮುನ್ನುಡಿ ಬರೆದ ಈ‌ ಪುಸ್ತಕಕ್ಕೆ, ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ ಆಶಯದ ನುಡಿಗಳನ್ನು, ಭಾಗೀರಥಿ ಹೆಗಡೆ ಬೆನ್ನುಡಿಯನ್ನು ನೀಡಿದ್ದಾರೆ. ಪದ್ಯಗಳ ತಿದ್ದುಪಡಿಯಲ್ಲಿ ಗಜಾನನ ಭಟ್ಟ ತುಳಗೇರಿ ಸಹಕರಿಸಿದರೆ, ಅಕ್ಷರ ದೋಷದ ತಿದ್ದುಪಡಿಯಲ್ಲಿ ಬಿಂದು ಹೆಗಡೆ, ಮುಖಪುಟ ವಿನ್ಯಾಸ ರವಿ ಹೆಗಡೆ, ಪ್ರಜ್ವಲ ಪ್ರಕಾಶನದವರು ಪ್ರಕಟಿಸಿದ್ದಾರೆ. ಬರೆದ ಎಲ್ಲ ಪ್ರಸಂಗವನ್ನೂ ಶ್ರೀಗಳಿಂದಲೇ ಬಿಡುಗಡೆಗೊಳಿಸಬೇಕೆಂಬ ನಿರ್ಮಲಾ ಹೆಗಡೆಯವರ ಸಂಕಲ್ಪದಂತೆ ಕಾರ್ಯಕ್ರಮ ನೆರವೇರಿತು. ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಎಂ.ಕೆ. ಹೆಗಡೆ ಗೋಳಿಕೊಪ್ಪ, ಸುರೇಶ ಹೆಗಡೆ ಹಕ್ಕಿಮನೆ ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top