Slide
Slide
Slide
previous arrow
next arrow

ವಿಕಲಚೇತನ ಮಗನನ್ನು ಹತ್ಯೆಗೈದು ನೇಣಿಗೆ ಶರಣಾದ ತಂದೆ

300x250 AD

ಕುಮಟಾ: ಇಲ್ಲಿನ ಹಳೇ ಮೀನು ಮಾರುಕಟ್ಟೆಯ ಪುರಸಭೆಯ ವಸತಿಗೃಹದಲ್ಲಿ ತಡರಾತ್ರಿ ತಂದೆಯೊಬ್ಬ ವಿಕಲಚೇತನ ಮಗನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಪ್ರೀತಮ್ ಹರಿಜನ್ (15), ಶ್ರೀಧರ ಹರಿಜನ್ (45) ಮೃತದುರ್ದೈವಿಗಳು.

ಪ್ರೀತಮ್ ಹರಿಜನ್ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ. ಮಗನ ಅನಾರೋಗ್ಯದಿಂದ ಮಾನಸಿಕವಾಗಿ ಶ್ರೀಧರ ಕುಗ್ಗಿ ಹೋಗಿದ್ದರು. ಮಾನಸಿಕ ಖಿನ್ನತೆಗೂ ಜಾರಿದ್ದ ಶ್ರೀಧರ ಮನನೊಂದು ಮಗನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಮಾಳಿಗೆಗೆ ತೆರಳಿ ಶ್ರೀಧರ ನೇಣು ಬಿಗಿದುಕೊಂಡಿದ್ದಾರೆ.

300x250 AD

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

Share This
300x250 AD
300x250 AD
300x250 AD
Back to top