• Slide
    Slide
    Slide
    previous arrow
    next arrow
  • ದೇಶ ದುರ್ಬಲ ಆಗುತ್ತಿರುವುದು ಹೊರಗಿನವರ ಆಕ್ರಮಣದಿಂದಲ್ಲ: ಮುಹಮ್ಮದ್ ಕುಂಞ

    300x250 AD

    ಭಟ್ಕಳ: ಒಂದು ದೇಶ, ಸಮಾಜ ದುರ್ಬಲಗೊಳ್ಳಬೇಕಾದರೆ ಅದಕ್ಕೆ ಹೊರಗಿನವರೇ ಆಕ್ರಮಣ ಮಾಡಬೇಕಾಗಿಲ್ಲ. ಬದಲಾಗಿ ನಮ್ಮೊಳಗಿನ ಶಿಥಿಲತೆಯಿಂದಲೆ ನಾವು ದುರ್ಬಲಗೊಳ್ಳುತ್ತೇವೆ. ಹಾಗಾಗಿ ನಮ್ಮ ದೇಶ ಇಂದು ದುರ್ಬಲತೆಯತ್ತ ಸಾಗುತ್ತಿರುವುದಕ್ಕೆ ಕಾರಣ ನಮ್ಮ ನಮ್ಮಲ್ಲಿನ ಒಡಕು ಶಿಥಿಲತೆಯೇ ಕಾರಣ ಎಂದು ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಹೇಳಿದರು.

    ಈದ್ ಮಿಲನ್- ಫ್ಯಾಮಿಲಿ ಗೆಟ್ ಟು ಗೆದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಗತ್ತಿನ ಶ್ರೇಷ್ಠ ಇತಿಹಾಸ ತಜ್ಞರು ಹೇಳಿದಂತೆ ಈ ಜಗತ್ತಿನಲ್ಲಿ ಯಾವುದೇ ಒಂದು ನಾಗರೀಕತೆ ನಾಶವಾಗಿದ್ದು ಹೊರಗಿನವರ ಆಕ್ರಮಣದಿಂದ ಅಲ್ಲ. ಅದು ಒಳಗಿನ ಶಿಥಿಲತೆಯಿಂದಾಗಿದೆ ಎಂಬುದು. ಒಂದು ದೇಶ, ಸಮಾಜ, ಕುಟುಂಬ ಹಾಳಾಗುವುದಾದರೆ ಅದು ಹೊರಗಿನವರ ಕುತಂತ್ರಗಳಿOದಾಗಿದೆ. ನಮ್ಮ ದೇಶ ಒಂದು ವೇಳೆ ದುರ್ಬಲ ಆಗುತ್ತಿದೆ ಎಂದಾದರೆ ಅದು ಇಲ್ಲಿನ ಆಂತರಿಕ ಶಿಥಿಲತೆ ಮತ್ತು ಅಭದ್ರತೆಯೇ ಕಾರಣ ಎಂದರು.
    ಹೊರಗಿನವರ ಆಕ್ರಮಣವನ್ನು ತಡೆಯುವ ಶಕ್ತಿ ಖಂಡಿತಾ ನಮ್ಮ ದೇಶಕ್ಕಿದೆ. ನಮ್ಮ ಪರಸ್ಪರ ಸಂಬ0ಧಗಳು ಕೆಟ್ಟು ಹೋಗಿವೆ. ಒಂದು ಮನೆಯಲ್ಲಿ ಪತಿ- ಪತ್ನಿ, ಮಕ್ಕಳ ಸಂಬ0ಧ ಚೆನ್ನಾಗಿಲ್ಲ. ಇದು ಆ ಮನೆ ಒಡೆದು ಹೋಗಲು ಕಾರಣವಾಗುತ್ತದೆ. ದೇಶದಲ್ಲಿನ ಎಲ್ಲ ಸಮಾಜ, ವರ್ಗದವರೊಂದಿಗೆ ನಮ್ಮ ಸಂಬoಧಗಳು ಉತ್ತಮವಾದಾಗ ಮಾತ್ರ ದೇಶ ಆಂತರಿಕವಾಗಿ ಸುಭದ್ರವಾಗಲು ಸಾಧ್ಯ ಎಂದರು.
    ನಮ್ಮ ಆಂತರಿಕ ಭದ್ರತೆಯನ್ನು ಕಾಪಾಡಿಕೊಳ್ಳಬೇಕಾದರೆ ನಮ್ಮಲ್ಲಿ ಪರಸ್ಪರ ತಿಳುವಳಿಕೆ ಹಾಗೂ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು.

    ‘ಬಾಹೆರ್ ಶೇರವಾನಿ, ಅಂದರ್ ಪರೇಶಾನಿ’ ಎಂಬ ಗಾದೆ ಮಾತಿನಂತಾಗಿದೆ ನಮ್ಮ ದೇಶದ ಪರಿಸ್ಥಿತಿ. ನಾವು ಹೊರಜಗತ್ತಿನ ತುಂಬಾ ಸುಖಿಗಳಾಗಿ ಕಾಣುತ್ತಿದ್ದೇವೆ. ಆದರೆ ನಮ್ಮೊಳಗೆ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ನಮ್ಮ ಕುಟುಂಬ ಸಂಬOಧಗಳು, ಪರಸ್ಪರ ಧರ್ಮಿಯರ ನಡುವಿನ ಸಂಬ0ಧಗಳು, ತಂದೆ- ಮಕ್ಕಳ ನಡುವಿನ ಸಂಬoಧಗಳು ಎಲ್ಲವೂ ಶಿಥಿಲಗೊಂಡಿವೆ. ಇದರಿಂದಾಗಿ ನಮ್ಮಲ್ಲಿ ಭಯ, ಆತಂಕ, ಭ್ರಮೆಗಳು ಹುಟ್ಟಿಕೊಂಡಿವೆ. ಹೀಗಾದರೆ ದೇಶದ ಅಭಿವೃದ್ಧಿ ಅಸಾಧ್ಯ ಎಂದರು.
    ಕಾರವಾರ ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ಭವೇಶಾನಂದ ಮಹಾಂತ್ ಜಿ, ಮುಂಡಳ್ಳಿಯ ಲೂರ್ಡ್ಸ್ ಮಾತಾ ದೇವಾಲಯದ ಧರ್ಮಗುರು ಪ್ರೇಮಕುಮಾರ್ ಡಿ’ಸೋಜಾ, ಹೊನ್ನಾವರ ನಾಗರೀಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಅಲ್ ಸುನ್ನಾ ಚಾರಿಟೇಬಲ್ ಮತ್ತು ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಮೌಲಾನ ಮುಹಮ್ಮದ್ ಅಯ್ಯೂಬ್ ನದ್ವಿ ಬರ್ಮಾವರ್ ಮಾತನಾಡಿದರು.

    300x250 AD

    ಜಮಾಅತೆ ಇಸ್ಲಾಮಿ ಹಿಂದ್ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಮುಹಮ್ಮದ್ ತಲ್‌ಆ ಸಿದ್ದಿಬಾಪ ಅಥಿತಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರಿಸಿದರು. ಜಮಾ ಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಸ್ವಾಗತಿಸಿದರು. ಕಾರ್ಯದರ್ಶಿ ರವೂಫ್ ಆಹ್ಮದ್ ಸವಣೂರು ಧನ್ಯವಾದ ಅರ್ಪಿಸಿದರು. ಸದ್ಭಾವನಾ ಮಂಚ್‌ನ ಕಾರ್ಯದರ್ಶಿ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿದರು.
    ಕಾರ್ಯಕ್ರಮದಲ್ಲಿ ರಾಬಿತಾ ಸೂಸೈಟಿಯ ಮಾಜಿ ಪ್ರಧಾನ ಕಾರ್ಯದರ್ಶಿ ಉದ್ಯಮಿ ಮುಹಮ್ಮದ್ ಯೂನೂಸ್ ಖಾಜಿಯಾ, ಭಟ್ಕಳ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶ್‌ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮನಮೋಹನ್ ನಾಯ್ಕ, ಜನಪರ ಲೇಖಕ ಹಾಗೂ ಅಂಜುಮನ್ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಆರ್.ಎಸ್.ನಾಯಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top