Slide
Slide
Slide
previous arrow
next arrow

ಸರಸ್ವತಿ ಪ್ರಭಾ ಪುರಸ್ಕಾರಕ್ಕೆ ಎಕ್ಕಂಬಿಯ ಜಯಶ್ರೀ ನಾಯಕ ಆಯ್ಕೆ

300x250 AD

ಶಿರಸಿ: ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ ಪತ್ರಿಕೆ ಕೊಡಮಾಡುವ ಸರಸ್ವತಿ ಪ್ರಭಾ ಪುರಸ್ಕಾರಕ್ಕೆ ತಾಲೂಕಿನ ಎಕ್ಕಂಬಿಯ ಜಯಶ್ರೀ ನಾರಾಯಣ ನಾಯಕ ಆಯ್ಕೆಯಾಗಿದ್ದಾರೆ.

35ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಮಾಸಿಕ ಪತ್ರಿಕೆಯು ಕಳೆದ ವರ್ಷದಿಂದ ವಯೋವೃದ್ದ ಕೊಂಕಣಿ ಭಾಷೆ,ಸಾಹಿತ್ಯ, ಕಲೆ,ಲೋಕವೇದ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಅಂತವರಿಗೆ ಸರಸ್ವತಿ ಪ್ರಭಾ ಪುರಸ್ಕಾರ ನೀಡಲಾಗುತ್ತಿದೆ. ಅದರಂತೆ
2023 ರ ಸರಸ್ವತಿ ಪ್ರಭಾ ಪುರಸ್ಕಾರಕ್ಕೆ ಜಯಶ್ರೀ ನಾಯಕರನ್ನು ಆಯ್ಕೆ ಮಾಡಲಾಗಿದ್ದು, ಸನ್ಮಾನ ಪತ್ರ,ಸ್ಮರಣಿಕೆ,ಸೇರಿದಂತೆ 5000/- ರೂ ನಗದು ನೀಡಿ ಪುರಸ್ಕರಿಸಲಾಗುತ್ತದೆ ಎಂದು ಸರಸ್ವತಿ ಪ್ರಭಾ ಪತ್ರಿಕೆಯ ಸಂಪಾದಕ ಅರಗೋಡ ಸುರೇಶ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD

ಜಯಶ್ರೀ ನಾಯಕ ಕೊಂಕಣಿ ಲೇಖನ,ಕಾವ್ಯ,ಜಾನಪದ ಸಾಹಿತ್ಯ ಸಂಗ್ರಹ, ಸೇರಿದಂತೆ ಹಲವು ಕ್ಷೇತ್ರದಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಸಾಹಿತ್ಯ ರಚನೆ ಜೊತೆಗೆ ಇವರ ಎಂಟು ಕೊಂಕಣಿ ಕೃತಿಗಳು ಪ್ರಕಟಗೊಂಡಿವೆ, 25ಕ್ಕಿಂತ ಅಧಿಕ ಆಕಾಶವಾಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಇಲ್ಲಿ ಉಲ್ಲೆಖಿಸಬಹುದಾಗಿದೆ.

Share This
300x250 AD
300x250 AD
300x250 AD
Back to top