Slide
Slide
Slide
previous arrow
next arrow

ಲಯನ್ಸ್ ಶಾಲೆಯಲ್ಲಿ ಲಯನ್ಸ್ ಕ್ವೆಸ್ಟ್ ಕಾರ್ಯಕ್ರಮ ಯಶಸ್ವಿ

300x250 AD

ಶಿರಸಿ: ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆಯಿಂದ ನಡೆಸುವ ಲಯನ್ಸ್ ಕ್ವೆಸ್ಟ್ ಹದಿಹರೆಯದ ಮಕ್ಕಳಿಗಾಗಿ ಜೀವನ ಕೌಶಲ್ಯಗಳನ್ನು ಕಲಿಸುವ ತರಬೇತಿ ಕಾರ್ಯಕ್ರಮವಾಗಿದೆ. ಒಂದು ವರ್ಷದ ಅವಧಿಯಲ್ಲಿ ಸಂವಹನೆ, ಗ್ರಹಿಸುವಿಕೆ, ನಾಯಕತ್ವ, ಒತ್ತಡ ನಿರ್ವಹಣೆ, ದುಶ್ಚಟಗಳಿಂದ ದೂರವಿರುವುದು, ಆರೋಗ್ಯಕರ ದಿನಚರಿ, ಸಮಾಜ ಸೇವೆ ಮುಂತಾದ ವಿಷಯಗಳನ್ನೊಳಗೊಂಡ ಪಠ್ಯಕ್ರಮವನ್ನು ತರಬೇತಿ ಹೊಂದಿದ ಶಿಕ್ಷಕರು ನೀಡುವುದು ಇದರ ವಿಶೇಷತೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ, ಸಣ್ಣ ಸಣ್ಣ ಕುಟುಂಬ ವ್ಯವಸ್ಥೆಯಲ್ಲಿ, ನಗರೀಕರಣದ, ಅತಿಯಾದ ಬೇಕು ಬೇಡದ ವಿಷಯ ಸಂಗ್ರಹಣೆಯಲ್ಲಿ, ಮೊಬೈಲ್, ಅಂತರ್ಜಾಲದ ದುರುಪಯೋಗದಿಂದ ಮಕ್ಕಳ ತಲೆ ಮತ್ತು ಮನಸ್ಸು ಕಸದ ಬುಟ್ಟಿಯಾಗದೇ ತಮ್ಮ ಹದಿಹರೆಯವನ್ನು ಆರೋಗ್ಯಪೂರ್ಣವಾಗಿ ಕಳೆದು ಜವಾಬ್ದಾರಿಯುತ ಯುವಕ ಯುವತಿಯರನ್ನಾಗಿಸುವ ಈ ತರಬೇತಿ ಬಹಳ ಅರ್ಥಪೂರ್ಣವಾಗಿದೆ.

ಲಯನ್ಸ್ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಈ ತರಬೇತಿ ಪಡೆದ 70 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು. ಅನೇಕ ವಿದ್ಯಾರ್ಥಿಗಳು ಕ್ವೆಸ್ಟ್ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಹೇಗೆ ಸಹಾಯ ಮಾಡಿತು, ತಾವು ಏನೇನು ಕಲಿತೆವು ಎಂಬುದರ ಬಗ್ಗೆ ಅನಿಸಿಕೆ ಹಂಚಿಕೊಂಡರು. ಕು. ಮನೋಜ್ ತಾನು ಒಬ್ಬ ಅಂಧ ವಿದ್ಯಾರ್ಥಿಗೆ  SSLC ಪರೀಕ್ಷೆ ಬರೆಯಲು ಸಹಾಯ ಮಾಡಿದ್ದನ್ನು ಹೇಳಿ ಅದು ತನಗೆ ಸಂತೋಷ ಕೊಟ್ಟ ವಿಷಯವನ್ನು ಹಂಚಿಕೊಂಡನು. ಪ್ರತೀ ವರ್ಷ ಕೆಲವು ವಿದ್ಯಾರ್ಥಿಗಳು ಹೀಗೆ ಬೇರೆಯವರಿಗೆ ಸಹಾಯ ಮಾಡುವುದನ್ನು ಶಿಕ್ಷಕಿಯರು ಮೆಚ್ಚುಗೆಯಿಂದ ತಿಳಿಸಿದರು. ಲಯನ್ಸ್ ಜಿಲ್ಲೆ 317 ಇದರ ಡಿಸ್ಟ್ರಿಕ್ಟ್ ಛೇರ‍್ಪರ್ಸನ್ ರಮಾ ಪಟವರ್ಧನ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ತ್ರಿವಿಕ್ರಮ ಪಟವರ್ಧನ್ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎನ್.ವಿ.ಜಿ.ಭಟ್ ಮಕ್ಕಳಿಗೆ ಶುಭ ಹಾರೈಸಿದರು. ರೀಜನ್ ಛೇರ‍್ಪರ್ಸನ್ ಜ್ಯೋತಿ ಭಟ್, ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ರವಿ ನಾಯಕ್, ಡಾ. ಜಿ. ಎ. ಹೆಗಡೆ ಸೋಂದಾ, ಗುರುರಾಜ ಹೊನ್ನಾವರ ಮತ್ತು ಶರಾವತಿ ಭಟ್ ಉಪಸ್ಥಿತರಿದ್ದರು. ಕ್ವೆಸ್ಟ್ ಶಿಕ್ಷಕಿಯರಾದ ಸುಜಾತಾ ವಝೆ, ಗೀತಾ ನಾಯ್ಕ್ ಮತ್ತು ಮುಕ್ತಾ ನಾಯ್ಕ್  ಕಾರ್ಯಕ್ರಮವನ್ನು ಆಯೋಜಿಸಿದ್ದರು.

300x250 AD
Share This
300x250 AD
300x250 AD
300x250 AD
Back to top