ಶಿರಸಿ: ಇಲ್ಲಿನ ಮರಾಠಿಕೊಪ್ಪದ ಅಜಿತ ಮನೋಚೇತನಾ ಸಂಸ್ಥೆಯ ಆಶ್ರಯದಲ್ಲಿ ವಿಶ್ವಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಏ.9, ರವಿವಾರದಂದು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ಸ್ವಾಗತಿಸಿ, 10 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಶಾಲಾ ವಾಹನ ಚಾಲಕ ಗಣೇಶ ಕಾಮತರನ್ನು ಸನ್ಮಾನಿಸಿದರು. ಶಿರಸಿ ನಗರದ ಹಿರಿಯ ವೈದ್ಯೆ ಡಾ. ಶಾಂತಾ ಭಟ್ ಶಿಬಿರಕ್ಕೆ ಚಾಲನೆ ನೀಡಿದರು.
ಹುಬ್ಬಳ್ಳಿಯ ಡಾ. ಶ್ರೀನಿವಾಸ ಕುಲಕರ್ಣಿ ವಿಶ್ವಆರೋಗ್ಯ ದಿನದ ಸಂದೇಶ ನೀಡಿದರು. ಕ್ಯಾನ್ಸರ್ ರೋಗ ಹೆಚ್ಚುತ್ತಿದೆ. ಯುವಕರು ಮತ್ತು ಕಾರ್ಮಿಕ ವರ್ಗ ಗುಟ್ಕಾ ಸೇವನೆಗೆ ಬಲಿಯಾಗುತ್ತಿದ್ದಾರೆ. ಗುಟ್ಕಾ ತ್ಯಜಿಸಿ ಎಂದು ಕರೆ ನೀಡಿದರು. ಸಂಸ್ಥೆ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ, ಇನ್ನಷ್ಟು ದುಶ್ಚಟ ನಿವಾರಣಾ ಶಿಬಿರ ನಡೆಸಲು ಅಜಿತ ಮನೋಚೇತನಾ ಮುಂದಾಗಲಿದೆ ಎOದು ಪ್ರಕಟಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ನರ್ಮದಾ ಹೆಗಡೆ, ವ್ಯವಸ್ಥಾಪಕ ಗಣೇಶ ಮೊಗೇರ, ಮತ್ತು ನವೀನ ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡರು.