Slide
Slide
Slide
previous arrow
next arrow

ಸ್ಕೇಟಿಂಗ್ ಕ್ರೀಡಾ ಶಿಬಿರಕ್ಕೆ ಚಾಲನೆ

300x250 AD

ಶಿರಸಿ: ಇಂದು‌ ಶೈಕ್ಷಣಿಕ ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳೂ ಅಷ್ಟೇ ಅತ್ಯಗತ್ಯವಾಗಿದೆ. ಅದರಲ್ಲಿ ಶಿರಸಿಯಲ್ಲಿ ಕಳೆದ ಐದು ವರ್ಷಗಳಿಂದ ಆರಂಭವಾಗಿರುವ ಸ್ಕೇಟಿಂಗ್ ಕ್ರೀಡೆಯು ವಿಶೇಷ ಕ್ರೀಡೆಯಾಗಿದ್ದು, ತರಬೇತುದಾರರು ನೀಡುವ ಮಾರ್ಗದರ್ಶನವನ್ನು ಆಸಕ್ತಿಯಿಂದ ಪಡೆದು ನಗರದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿ’ ಎಂದು ಶಿರಸಿಯ ಅದ್ವೈತ ಸ್ಕೇಟಿಂಗ್ ರಿಂಕಿನಲ್ಲಿ ಸ್ಕೇಟಿಂಗ್ ಕ್ರೀಡೆಯ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ‌ ಶಿರಸಿ ರೋಟರಿ ಕ್ಲಬ್ ಅಧ್ಯಕ್ಷ ರೋ. ಗಣೇಶ ಹೆಗಡೆ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಶಿರಸಿಯ ಹಿರಿಯರಿಗೆ ಹಾಗೂ ಯುವಕರಿಗೂ ಈ ಸ್ಕೇಟಿಂಗ್ ಕ್ರೀಡೆಯ ತರಬೇತಿಯನ್ನು ಆರಂಭಿಸುವ‌ ಕುರಿತು ಸಲಹೆಯನ್ನೂ ನೀಡಿದರು.

ಇನ್ಮೋರ್ವ ಅತಿಥಿಗಳಾದ ಸುಮುಖ ಟಿವಿ ಹಾಗೂ ಶಿರಸಿ ಸಮಾಚಾರ ದಿನಪತ್ರಿಕೆಯ ಸಂಪಾದಕರಾದ ಸುಬ್ರಾಯ ಬಕ್ಕಳ ಮಾತನಾಡಿ ಅದ್ವೈತ ಸ್ಕೇಟಿಂಗ್ ಕ್ಲಬ್ ಸಂಪೂರ್ಣ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಸ್ಕೇಟಿಂಗ್ ಕ್ರೀಡೆಯಿಂದ ಉತ್ತಮವಾದ ಹೆಸರನ್ನು ಹೊಂದಿದ್ದು, ಇಲ್ಲಿ ತರಬೇತಿ ಪಡೆದ ಹಾಗೂ ಈಗಷ್ಟೇ ತರಬೇತಿಗೆ ಪ್ರವೇಶ ಪಡೆದ ಎಲ್ಲ ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಈ ಸ್ಕೇಟಿಂಗ್ ಕ್ರೀಡೆಗೆ ಪ್ರೋತ್ಸಾಹ ಸಿಗುವಂತಾಗಲಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಸ್ಕೇಟಿಂಗ್ ಕ್ಲಬ್ ಅಧ್ಯಕ್ಷ ರೋ‌ಟರಿಯನ್ ಕಿರಣಕುಮಾರ್ ಮಾತನಾಡಿ ಪ್ರತಿವರ್ಷದಂತೆ ಈ ಎಪ್ರಿಲ್ ಮೇ ರಜಾ ದಿನಗಳಲ್ಲಿ ವಿಶೇಷವಾದ ಸ್ಕೇಟಿಂಗ್ ಕ್ರೀಡಾ ತರಬೇತಿಯನ್ನು ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಅದ್ವೈತ ಸ್ಕೇಟಿಂಗ್ ರಿಂಕಿನಲ್ಲಿ ನಡೆಯುತ್ತಿದ್ದು, ನೂರಾರು ವಿದ್ಯಾರ್ಥಿಗಳು ‌ಸ್ಕೇಟಿಂಗ್ ಕ್ರೀಡೆಯ ತರಬೇತಿಯನ್ನು ಪಡೆಯುತ್ತಿದ್ದಾರೆ.‌ ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ನೂರಿತ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ. ಸ್ಕೇಟಿಂಗ್ ಕ್ರೀಡೆಗೆಂದೇ ನಿರ್ಮಾಸಲಾದ ವಿಶಾಲವಾದ ರಿಂಕಿನಲ್ಲಿ ಮಕ್ಕಳು ಕಾಲಿಗೆ ಕಟ್ಟಿದ ಗಾಲಿಗಳ ಮೇಲೆ ಚಲಿಸುವುದನ್ನು ನೋಡುವುದೇ ಒಂದು ಅದ್ಬುತ ಅನುಭವವಾಗಿದೆ. ಆಸಕ್ತ ಪಾಲಕರು ತಮ್ಮ ಮಕ್ಕಳನ್ನು ಈ ಶಿಬಿರದಲ್ಲಿ ಸೇರಿಸಿದ್ದಲ್ಲಿ ಅವರನ್ನು‌ ಉತ್ತಮ ಸ್ಕೇಟಿಂಗ್ ಕ್ರೀಡಾಪಟುಗಳನ್ನಾಗಿ ತಯಾರು ಮಾಡುವ ಜವಾಬ್ದಾರಿ ನಮ್ಮ ಸ್ಕೇಟಿಂಗ್ ಕ್ಲಬಿನದೆಂದು ತಿಳಿಸಿದರು‌.

300x250 AD

ಈ ಸಂದರ್ಭದಲ್ಲಿ ಪಯಣ ಪ್ರವಾಸೋದ್ಯಮ ಸಂಸ್ಥೆಯ ಆಡಳಿತಾಧಿಕಾರಿ ವಿಶ್ವನಾಥ ಕುಡಾಳಕರ, ಪರಮೇಶ್ವರ ನಾಯ್ಕ,‌ ಸ್ಕೇಟಿಂಗ್ ಕ್ಲಬ್ ನಿರ್ದೇಶಕಿ ಸುಲಕ್ಷಣಾ, ತರಬೇತುದಾರರಾದ ಶ್ಯಾಮಸುಂದರ, ತರುಣಗೌಳಿ‌ ಹಾಗೂ ಸಂಪ್ರೀತ್ ಉಪಸ್ಥಿತಿತರಿದ್ದರು.

ಕಾರ್ಯಕ್ರಮವನ್ನು ಅರ್ಚನಾ ಪಾವುಸ್ಕರ್ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top