ಯಲ್ಲಾಪುರ: 2022-23ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾಲೂಕಿನ ಆರು ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರದಿಂದ ನಡೆಯುತ್ತಿದೆ. ಒಟ್ಟು 951 ದಾಖಲಾತಿ 949ರಲ್ಲಿ 948 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು.
ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ 220 ವಿದ್ಯಾರ್ಥಿಗಳು, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಯಲ್ಲಾಪುರದ ಕೇಂದ್ರದಲ್ಲಿ 181 ವಿದ್ಯಾರ್ಥಿಗಳು, ಯಲ್ಲಾಪುರ ಸರಕಾರಿ ಪ್ರೌಢಶಾಲೆಯಲ್ಲಿ 167 ವಿದ್ಯಾರ್ಥಿಗಳು, ಮಂಚಿಕೇರಿ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ 132 ವಿದ್ಯಾರ್ಥಿಗಳು, ವಜ್ರಳ್ಳಿ ಸರ್ವೋದಯ ಶಾಲೆಯಲ್ಲಿ 84 ವಿದ್ಯಾರ್ಥಿಗಳು ಹಾಗೂ ಕಿರವತ್ತಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ 166 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು.
ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಆರು ಮುಖ್ಯ ಅಧೀಕ್ಷಕರು, ಆರು ಜನ ಕಸ್ಟೋಡಿಯನ್, 6 ಸ್ಥಾನಿಕ ಜಾಗೃತ ದಳದವರು, 6 ಮೊಬೈಲ್ ಸ್ವಾಧೀನಾಧಿಕಾರಿಗಳು,12 ಜನ ಡಿ ದರ್ಜೆ ನೌಕರರು ಹಾಗೂ ಸಹಾಯಕರು ನೇಮಿಸಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಪರೀಕ್ಷಾ ಕೇಂದ್ರದ ಸುತ್ತಮುತ್ತ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಪರೀಕ್ಷಾರ್ಥಿಗಳಿಗೆ ಆರೋಗ್ಯದ ಸಮಸ್ಯೆ ಬಾರದಂತೆ ಮುಂಜಾಗ್ರತೆ ವಹಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಪ್ರತಿ ಕೇಂದ್ರದಲ್ಲೂ ನೇಮಿಸಲಾಗಿದೆ. ಪರೀಕ್ಷಾರ್ಥಿಗಳ ಹಾಗೂ ಮೇಲ್ವಿಚಾರಕರ ನಡುವಳಿಕೆಗಳನ್ನು ವೀಕ್ಷಿಸಲು ಸಿಸಿ ಕ್ಯಾಮೆರಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ತಿಳಿಸಿದ್ದಾರೆ.