• Slide
    Slide
    Slide
    previous arrow
    next arrow
  • ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಲಾಡು ಪ್ರಸಾದ ವಿತರಣೆ

    300x250 AD

    ಶಿರಸಿ: ಯುಗಾದಿ ಹಬ್ಬದ ಪ್ರಯುಕ್ತ ನಗರದ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ , ಉಣ್ಣೆಮಠಗಲ್ಲಿ ನಟರಾಜ ವೃತ್ತ , ಶಿರಸಿ ವತಿಯಿಂದ  ಬೂಂದಿ ಲಾಡು ಪ್ರಸಾದವನ್ನು ಉಚಿತವಾಗಿ ವಿತರಿಸಲಾಯಿತು.

    ಧರ್ಮದರ್ಶಿ ಮಂಡಳದ ಅಧ್ಯಕ್ಷ ಆರ್. ಜಿ. ನಾಯ್ಕ್, ಧರ್ಮದರ್ಶಿಗಳಾದ ಎಸ್. ಪಿ. ಶೆಟ್ಟಿ, ಸುಧೀರ ಹಂದ್ರಾಳ, ಸುದೇಶ ಜೋಗಳೇಕರ್, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ,ಅಬಕಾರಿ ಡಿವೈಎಸ್ ಪಿ ಮಹೇಂದ್ರ ನಾಯ್ಕ್, ಆರ್ ಎಫ್ ಓ ಮಂಜುನಾಥ ನಾಯ್ಕ್,ಪ್ರತಿಭಾ ನಾಯ್ಕ್,ಶೋಭಾ ನಾಯ್ಕ್ ಗಣೇಶ ನಗರ,ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ್ ಸಾಗರ್,ಪ್ರವೀಣ್ ಪಿ. ಜೈವಂತ ಪಾಲ್ಗೊಂಡು ಪ್ರಸಾದ ವಿತರಣೆ ಮಾಡಿದರು.

    300x250 AD

    ದಾನಿಗಳ ನೆರವು ಮತ್ತು ಟ್ರಸ್ಟ್ ಸದಸ್ಯರ ಸಹಯೋಗದೊಂದಿಗೆ ನಡೆದ ಈ ಪ್ರಸಾದ ವಿತರಣಾ ಕಾರ್ಯಕ್ರಮದ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಸಚಿನ್ ಕೋಡಕಣಿ,ಸಂಚಾಲಕರಾದ ಶ್ರೀಪತಿ ನಾಯ್ಕ,ಸತೀಶ್ ನಾಯ್ಕ್ ಮಧುರವಳ್ಳಿ, ಕೇಶವ ಪಾಲೇಕರ್ ಸದ್ಗುರು ಪ್ರಿಂಟರ್ಸ್,ಕಿರಣ್ ಮಡಿವಾಳ,ರಾಜೇಶ್ ಮೈದುರ್ಗೀಮಠ,ರಾಜೇಶ ಲಕ್ಕಿ ಬುಕ್ ಸ್ಟಾಲ್,ದಿನೇಶ್ ನಾಯ್ಕ್ ಉಪಸ್ಥಿತರಿದ್ದರು. 
    ದೇವಸ್ಥಾನಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಲಾಡು ಪ್ರಸಾದ ವಿತರಿಸುವ ಮೂಲಕ ಟ್ರಸ್ಟ್ ನ ಪದಾಧಿಕಾರಿಗಳು ಸಾರ್ಥಕತೆಯನ್ನು ಕಂಡರು. ಈ ಕಾರ್ಯಕ್ರಮಕ್ಕೆ  ಸ್ಥಳಾವಕಾಶ ನೀಡಿ ಪ್ರಸಾದ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀ ಮಾರಿಕಾಂಬಾ ಧರ್ಮದರ್ಶಿ ಮಂಡಳಿ ಮತ್ತು ಗಣ್ಯರಿಗೆ ಕೃತಜ್ಞತೆ ಸಮರ್ಪಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top