ಭಟ್ಕಳ: ಮನೆಯ ಪಕ್ಕದ ತೋಟದ ಬಾವಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಳಲಖಂಡ ಗುಳ್ಮೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಪ್ರತಿಭಾ ಗೊಂಡ ಎಂದು ಗುರುತಿಸಲಾಗಿದೆ. ಈಕೆ ಎಂದಿನಂತೆ ರಾತ್ರಿ ಊಟ ಮಾಡಿ ಮಲಗಿಕೊಂಡವಳು ಬೆಳಿಗ್ಗೆ ಎದ್ದು ನೋಡಿದಾಗ ಮಲಗಿದ್ದ ಜಾಗದಲ್ಲಿ ಇರಲಿಲ್ಲ. ಈ ಹಿನ್ನೆಲೆ ಮನೆಯವರು ಎಲ್ಲಾ ಕಡೆ ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಅಲ್ಲೇ ಮನೆಯ ಪಕ್ಕದ ತೋಟದ ಬಾವಿಯಲ್ಲಿ ನೋಡಿದಾಗ ಬಾವಿಯ ನೀರಿನಲ್ಲಿ ಪ್ರತಿಭಾಳ ಮೃತ ಶರೀರ ಕಂಡುಬಂದಿದೆ.
ಈಕೆ ಬೈಂದೂರಿನ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಅಲ್ಲಿ ಹುಡುಗನೊಬ್ಬನ ಪರಿಚಯವಾಗಿದ್ದು, ತನ್ನ ಮಗಳ ಸಾವಿಗೆ ಆತನೇ ಕಾರಣ ಎಂದು ಯುವತಿಯ ತಂದೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತೋಟದ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ
