• Slide
    Slide
    Slide
    previous arrow
    next arrow
  • ಭತ್ತದ ಬಣವೆಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

    300x250 AD

    ದಾಂಡೇಲಿ: ದನಕರುಗಳಿಗೆ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಭತ್ತದ ಒಣ ಮೇವಿನ ಬಣವೆಗೆ ಆಕ್ಮಿಸಿಕವಾಗಿ ಬೆಂಕಿ ಬಿದ್ದು ಅವಘಡ ಸಂಭವಿಸಿದೆ.
    ದನ, ಕರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಅಂಬೇವಾಡಿ ಗಾವಠಾಣ ಗ್ರಾಮದ ನಿವಾಸಿ ಚಿಮಿಣಿ ಬಾಗುಬಾಯಿ ಕಾತ್ರೋಟು ಅವರಿಗೆ ಸೇರಿದ್ದ ಅವರ ಮನೆ ಮುಂಭಾಗದಲ್ಲಿ ಭತ್ತದದ ಒಣ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದ ಒಣ ಮೇವಿನ ಬಣವೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೆ ತಕ್ಷಣವೆ ಸ್ಥಳೀಯರು ಸೇರಿ ಬೆಂಕಿ ನಂದಿಸುವ ಕಾರ್ಯಕ್ಕಿಳಿದಿದ್ದಾರೆ.
    ಇದೇ ಸಮಯದಲ್ಲಿ ಮಾಹಿತಿ ಪಡೆದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳವು ಸ್ಥಳಕ್ಕಾಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದೆ. ಸ್ಥಳೀಯರ ಸಮಯೋಚಿತ ಸ್ಪಂದನೆ ಮತ್ತು ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದವರ ಶ್ರಮದಿಂದ ಆಗಬಹುದಾದ ಅನಾಹುತವೊಂದು ತಪ್ಪಿದಂತಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top