Slide
Slide
Slide
previous arrow
next arrow

ಪರೇಶ‌ ಮೇಸ್ತಾ ಪ್ರಕರಣ: 122 ಜನರ ಮೇಲಿನ ಕೇಸ್ ವಾಪಸ್

300x250 AD

ಕಾರವಾರ:- ಪರೇಶ್ ಮೇಸ್ತಾ ಹತ್ಯೆ ಗಲಭೆಯಲ್ಲಿ ದಾಖಲಾಗಿದ್ದ ಪ್ರಕರಣ ವನ್ನು ಹಿಂಪಡೆದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.2017 ರಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡಿದ್ದ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ಹತ್ಯೆ ಖಂಡಿಸಿ ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು.

ಶಿರಸಿಯಲ್ಲಿ ನಡೆದಿದ್ದ ಗಲಭೆಯಲ್ಲಿ 122 ಜನರ ಮೇಲಿದ್ದ ಮೂರು ಪ್ರಕರಣ ಹಿಂಪಡೆದು ಮುಖ್ಯಮಂತ್ರಿ ಬೊಮ್ಮಾಯಿ ಆದೇಶ ಮಾಡಿದ್ದಾರೆ.

300x250 AD

ಈ ಹಿಂದೆ ಶಿರಸಿಯಲ್ಲಿ ದಾಖಲಾಗಿದ್ದ 26 ಪ್ರಕರಣವನ್ನು ಹಿಂಪಡೆದಿತ್ತು. ಆದರೆ 112 ಜನರ ಮೇಲೆ ಮೂರು ಪ್ರಕರಣಗಳು ಬಾಕಿ ಉಳಿದಿದ್ದವು. ಶಿರಸಿಯಲ್ಲಿ ನಡೆದ ಗಲಾಟೆಯಲ್ಲಿ ಅಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ,ಬಿಜೆಪಿ ಕಾರ್ಯಕರ್ತರು ಬಜರಂಗದಳ ಕಾರ್ಯಕರ್ತರು ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿತ್ತು.

Share This
300x250 AD
300x250 AD
300x250 AD
Back to top