ಮುಂಡಗೋಡ: ತಾಲೂಕಾ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ಬಾರದೆ ಪೋಷಕರು ವೈದ್ಯರಿಗಾಗಿ ಕಾದು ಕಾದು ಸುಸ್ತಾಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
10- 15 ದಿನಗಳಿಂದ ಮಕ್ಕಳ ವೈದ್ಯರು ಆಸ್ಪತ್ರೆಗೆ ಬರುತ್ತಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಬರೆದುಕೊಡುವ ಔಷಧಿ ಕೇಂದ್ರದಲ್ಲಿ ಒಂದೋ- ಎರಡೋ ಔಷಧಿ ದೊರಕುತ್ತದೆ. ಬಹುತೇಕ ಔಷಧಿಗಳನ್ನು ಖಾಸಗಿ ಔಷಧಿ ಕೇಂದ್ರದಲ್ಲಿ ಖರೀದಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಪೊಲೀಸ್ ಪಿಎಸ್‌ಐ ಯಲ್ಲಾನಿಂಗ ಕುನ್ನೂರ, ಎನ್.ಡಿ.ಜಕ್ಕಣ್ಣನವರ ಹಾಗೂ ಸಿಬ್ಬಂದಿ ಸುರೇಶ ಸ್ಥಳಕ್ಕೆ ಬಂದು ಸಾರ್ವಜನಿಕರಿಗೆ ತಿಳಿಪಡಿಸಿದ್ದರು.
ಆಸ್ಪತ್ರೆಗೆ ಬಾರದ ಮಕ್ಕಳ ವೈದ್ಯರು; ಪೋಷಕರ ಪ್ರತಿಭಟನೆ
