• Slide
    Slide
    Slide
    previous arrow
    next arrow
  • ಬಜೆಟ್’ನಲ್ಲಿ ರೈತರಿಗಾಗಿ 20 ಲಕ್ಷ ಕೋಟಿ ರೂ.ಕೃಷಿ ಸಾಲ ಮೀಸಲು: ಕೇಂದ್ರದ ನಿರ್ಣಯ ಸ್ವಾಗತಾರ್ಹವೆಂದ ಕೆಶಿನ್ಮನೆ

    300x250 AD

    ಶಿರಸಿ: ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಸ್ತುತ ಸಾಲಿನ ಕೇಂದ್ರ ಸರಕಾರದ ಬಜೆಟ್ ನಲ್ಲಿ ರೈತರಿಗೆ 20 ಲಕ್ಷ ಕೋಟಿ ಕೃಷಿ ಸಾಲವನ್ನು ನೀಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಿರ್ಣಯವನ್ನು ಸ್ವಾಗತಿಸುವುದಾಗಿ ಕೆಎಂಎಫ್ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ, ಹಾಲು ಒಕ್ಕೂಟದ ನಿರ್ದೇಶಕ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಹೇಳಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬುಧವಾರ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ದೂರದರ್ಶಿ ಬಜೆಟ್ ಆಗಿದೆ. ಸರ್ವರನ್ನೂ ಒಳಗೊಂಡು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುವ ಸಂಕಲ್ಪದ ಪ್ರತಿಫಲನ ಈ ಬಜೆಟ್ ನಲ್ಲಿ ಕಂಡುಬಂದಿದೆ. ದೇಶದ ಆಧಾರ ಸ್ಥಂಬವಾಗಿರುವ ರೈತರ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತುವ ಮೂಲಕ ಅನ್ನದಾತರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಕೇಂದ್ರ ಸರಕಾರ ಮಾಡಿದೆ.

    ಮಧ್ಯಮ ವರ್ಗ, ಮಹಿಳೆಯರು ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮೋದಿ ಸರಕಾರ ನೀಡಿರುವ ಸವಲತ್ತುಗಳ ಫಲ ಮುಂಬರುವ ದಿನದಳಲ್ಲಿ ಕಾಣಲಿದೆ. ಸಹಕಾರಿ ಕ್ಷೇತ್ರ, ಗ್ರೀನ್ ಎನರ್ಜಿ, ಸಾವಯವ ಧಾನ್ಯಗಳಿಗೆ ಒತ್ತು ನೀಡಿರುವ ಈ ಬಜೆಟ್ ದೇಶದ ಸಮಸ್ತ ನಾಗರಿಕರ ಶ್ರೇಯಸ್ಸನ್ನು ಬಯಸುತ್ತದೆ. ಸರ್ವರ ಹಿತ ಕಾಯುವ ಕೇಂದ್ರ ಸರಕಾರದ ಈ ಬಜೆಟ್ ಪೂರ್ಣ ಪ್ರಮಾಣದಲ್ಲಿ ದೇಶದ ಜನರ ಮನಗೆಲ್ಲಲಿದೆ.

    300x250 AD

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಈ ಬಾರಿಯ ಬಜೆಟ್ ನಲ್ಲಿಯೂ ಸಹ ಹೈನುಗಾರರು, ಪಶುಸಂಗೋಪನೆ, ಹಾಲು ಉತ್ಪಾದಕರಿಗೆ ಅನುಕೂಲವಾಗವಂತೆ ಬಜೆಟ್ ಮಂಡನೆಯಾಗುವ ವಿಶ್ವಾಸವಿದೆ ಎಂದಿರುವ ಅವರು, ಸಮಸ್ತ ಹೈನುಗಾರರ ಪರವಾಗಿ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top