• Slide
    Slide
    Slide
    previous arrow
    next arrow
  • ಕಾರವಾರದಲ್ಲಿ ಪಠಾಣ್ ಚಿತ್ರ ಪ್ರದರ್ಶನಕ್ಕೆ ವಿರೋಧ: ಪ್ರತಿಭಟನಾಕಾರರು ಪೋಲೀಸ್ ವಶಕ್ಕೆ

    300x250 AD

    ಕಾರವಾರ: ನಗರದ ಅರ್ಜುನ್ ಚಿತ್ರಮಂದಿರದಲ್ಲಿ ಪಠಾಣ್ ಚಿತ್ರ ಪ್ರದರ್ಶಿಸದಂತೆ ಆಗ್ರಹಿಸಿ ಗುರುವಾರ ಪ್ರತಿಭಟನೆಗೆ ಯತ್ನಿಸಿದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

    ದೇಶ ವಿರೋಧಿ ದೃಶ್ಯಗಳನ್ನು ತೋರಿಸಲಾಗಿದೆ ಎಂದು ಆರೋಪಿಸಿ ಪಠಾಣ್ ಚಿತ್ರ ಪ್ರದರ್ಶಿಸಲು ಅವಕಾಶ ನೀಡಬಾರದು ಎಂದು ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. ಪ್ರದರ್ಶನ ಮುಂದುವರೆದರೆ ಪ್ರತಿಭಟಿಸುವುದಾಗಿ ಬುಧವಾರ ಎಚ್ಚರಿಸಿದ್ದರು.

    ಆದರೆ ಚಿತ್ರಮಂದಿರದಲ್ಲಿ ಪಠಾಣ್ ಚಲನಚಿತ್ರ ಪ್ರದರ್ಶನ ನಡೆಯುತ್ತಿದ್ದ ಕಾರಣ ಚಿತ್ರಮಂದಿರದ ಗೇಟಿಗೆ ಬೀಗ ಹಾಕಲು ಕಾರ್ಯಕರ್ತರು ಮುಂದಾದ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ಪರೇಡ್ ಮೈದಾನಕ್ಕೆ ಕರೆದೊಯ್ದರು.

    300x250 AD

    ಈ ಸಂದರ್ಭದಲ್ಲಿ ನಂದಕಿಶೋರ ನಾಯ್ಕ, ಕಮಲಾಕರ, ಇತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top