Slide
Slide
Slide
previous arrow
next arrow

ಹಳ್ಳಿಕಾನ ಭೂತೇಶ್ವರ ದೇವರ ವಾರ್ಷಿಕೋತ್ಸವ ಸಂಪನ್ನ

300x250 AD

ಶಿರಸಿ: ತಾಲೂಕಿನ ಹಳ್ಳಿಕಾನ ಶ್ರೀಭೂತೇಶ್ವರ ದೇವರ 50ನೇ ವರ್ಷದ ವಾರ್ಷಿಕೋತ್ಸವ ಅತ್ಯಂತ ಸಂಭ್ರಮ- ಸಡಗರ ಹಾಗೂ ಭಕ್ತಿಯಿಂದ ನಡೆಯಿತು. 10 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿ ದೇವರ ಆಶೀರ್ವಾದ ಪಡೆದುಕೊಂಡರು.
ಪ್ರತಿ ವರ್ಷ ಮಕರ ಸಂಕ್ರಾತಿಯoದು ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮದ 50ನೇ ವರ್ಷಾಚರಣೆಯಾದ ಕಾರಣ ಈ ಬಾರಿ ಅದ್ಧೂರಿಯಾಗಿ ಎರಡು ದಿನಗಳ ಕಾರ್ಯಕ್ರಮ ಸಂಘಟನೆ ಮಾಡಲಾಗಿತ್ತು. ಗುರವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಸಭಾ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಜ.13ರಂದು ಬೆಳಿಗ್ಗೆ 8ಕ್ಕೆ ಶ್ರೀದೇವರ ಬೆಳ್ಳಿ ಮುಖ ಕವಚ ಮೆರವಣಿಗೆ ನಡೆಯಿತು. ಬಳಿಕ ವಿವಿಧ ಪೂಜೆ ಪುನಸ್ಕಾರಗಳು, ಗಣಹವನ ನಡೆಸಿಕೊಡಲಾಯಿತು. ಬಳಿಕ ನಡೆದ ಧರ್ಮಸಭೆಯಲ್ಲಿ ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತೀ ಮಹಾಸ್ವಾಮೀಜಿಗಳು ಹಾಗೂ ಕ್ಯಾದಗಿಕೊಪ್ಪ ಗುರುಮಠದ ಶ್ರೀಕಲ್ಯಾಣ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಭೀಮಣ್ಣ ನಾಯ್ಕ, ವೆಂಕಟೇಶ ನಾಯ್ಕ ಮುಂತಾದವರು ಭಾಗವಹಿಸಿದ್ದರು.
ಜ.14ರ ಬೆಳಿಗ್ಗೆ 8ರಿಂದ ಸಾಮೂಹಿಕ ಸತ್ಯನಾರಾಯಣ ವೃತಕಥೆ, ವಿವಿಧ ಪೂಜೆ, ಎಳ್ಳು ಬೆಲ್ಲ ಹಂಚಿಕೆ ನಡೆಯಿತು. ಮಧ್ಯಾಹ್ನ ಬೃಹತ್ ಸಾಮೂಹಿಕ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ನಂತರ ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸಿದ ಪ್ರಮುಖರನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ವೇಳೆ ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷ ಕಾಗೇರಿ ಭಾಗವಹಿಸಿ, ಹಳ್ಳಿಕಾನ ಗ್ರಾಮದ ಬಹುದಿನಗಳ ಬೇಡಿಕೆಯಾದ ಸರ್ವಋತು ರಸ್ತೆ ಹಾಗೂ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರವಾಗಿ ಕಲ್ಪಿಸುವುದಾಗಿ ಭರವಸೆ ನೀಡಿದರು. ನಂತರ ಸಾಲಿಗ್ರಾಮ ಮೇಳದಿಂದ ಚಂದ್ರಾವಳಿ ವಿಲಾಸ, ನಾಗಶ್ರೀ ಯಕ್ಷಗಾನ ಪ್ರದರ್ಶನ ಜರುಗಿತು.

300x250 AD
Share This
300x250 AD
300x250 AD
300x250 AD
Back to top