ಮಂಗಳೂರು: ದ್ವಿ-ದಶಮಾನೋತ್ಸವದ ಆಚರಣೆಗಳ ಸಂಭ್ರಮದಲ್ಲಿರುವ ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನ ಟ್ರಸ್ಟ್ ವತಿಯಿಂದ ದೇಶ ಮತ್ತು ವಿದೇಶಗಳಲ್ಲಿ ವಿಶಿಷ್ಟ ಸೇವೆಗೈದ ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಕ್ಷೇತ್ರದ ಹೀರೋ, ಬೀದರಿನ ಪ್ರತಿಷ್ಟಿತ ಶಾಹಿನ್ ವಿದ್ಯಾ ಸಂಸ್ಥೆಗಳ ರುವಾರಿ ಆರೋಗ್ಯ ಮತ್ತು ಸಮಾಜ ಸುಧಾರಣಾ ಕ್ಷೇತ್ರದಲ್ಲಿ ಅಪಾರ ಕೊಡುಗೆಗಳನ್ನು ದೇಶಕ್ಕೆ ನೀಡಿದ ಶಿಕ್ಷಣ ಸಂಸ್ಥೆ ಡಾ.ಅಬ್ದುಲ್ ಖಾದೀರ್ ಸಾಹಬ್, ಕಲ್ಲೂರು ಎಜ್ಯುಕೇಶನ್ ಟ್ರಸ್ಟ್ ಮೂಲಕ ಕಾರ್ಯನಿರ್ವಹಿಸುತ್ತಿರುವ ಅನಾಥ ಬಡ ಮಕ್ಕಳ ವಿಧ್ಯಾಭ್ಯಾಸ, ಅನಾಥಾಲಯ ವೃಧ್ದಾಶ್ರಮ ಶಿಕ್ಷಣ ಸಂಸ್ಥೆ, ಆರೋಗ್ಯ ರಕ್ತದಾನ ಶಿಬಿರ, ಹಾಗೂ ಸಮಾಜ ಸೆವೆಯಲ್ಲಿ ತೊಡಗಿರುವ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪುರಸ್ಕೃತರಾಗಿರುವ ಡಾ.ಇಬ್ರಾಹಿಂ ಕಲ್ಲೂರ್, ಶಿವಮೊಗ್ಗದಲ್ಲಿ ಅಲ್ ಹಬಿಬ್ ವಿದ್ಯಾ ಸಂಸ್ಥೆಗಳ ಮೂಲಕ ಶೈಕ್ಷಣಿಕ ರಂಗದಲ್ಲಿ ಜಿ.ಎಂ. ಆಸ್ಪತ್ರೆಗಳ ಮೂಲಕ ಆರೋಗ್ಯ ಕ್ಷೆತ್ರದಲ್ಲಿ ಸಾಮಾಜಿಕ ಸೇವಾ ರಂಗದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿರುವ ಇಂಜಿನಿಯರ್ ಮೊಹಮ್ಮದ್ ಇಬ್ರಾಹಿಂ, ದೇಶ ವಿದೇಶಗಳಲ್ಲಿ ತಮ್ಮ ವೈಜ್ಞಾನಿಕ ಸೆವೆಗಳ ಮೂಲಕ ಖ್ಯಾತಿಯನ್ನು ಪಡೆದ ವಿಜ್ಞಾನಿ ಪ್ರೊಫೆಸರ್ ಅಬ್ಬುಲ್ ರೆಹಮಾನ್ ಬೇಗ್, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಸಂಪಾದಕಿ ಮಂಗಳೂರಿನ ಸಹನಾಜ ಎಂ. ಹೀಗೆ ಐವರು ಗಣ್ಯರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಊರ ಮತ್ತು ಪರವೂರ ನಾಗರಿಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಕಾಲೆಜಿನ ಪ್ರಾಂಶುಪಾಲೆ ಶ್ರೀಮತಿ ಹೇಮಲತಾ ಬಿ.ಡಿ. ಹಾಗೂ ಶಿಕ್ಷಕಿಯರು ಕಾಲೇಜಿನ ವಿದ್ಯಾರ್ಥಿನಿಯರು, ಊರಿನ ಗಣ್ಯರು ಉಪಸ್ಥಿತರಿದ್ದು ಶುಭಕೋರಿದರು.