Slide
Slide
Slide
previous arrow
next arrow

ದೇಶಪಾಂಡೆ ಹಿರಿತನಕ್ಕೆ ಸಂದ ಗೌರವ: ಸುಜಾತಾ ಗಾಂವಕರ್

300x250 AD

ಅಂಕೋಲಾ: 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಮಾಜಿ ಸಚಿವ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಸಿಕ್ಕಿರುವುದು ಅವರ ಅಪಾರ ಸೇವಾನುಭವ ಹಾಗೂ ಹಿರಿತನಕ್ಕೆ ಸಂದ ಗೌರವ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ್ ಹೇಳಿದ್ದಾರೆ.
ದೇಶಪಾಂಡೆಯವರು ಇಡೀ ದೇಶಕ್ಕೆ ಮಾದರಿಯಾದ ರಾಜಕಾರಣಿಯಾಗಿದ್ದಾರೆ. ಎಂಟು ಬಾರಿ ವಿಧಾನ ಸಭೆಗೆ ಪ್ರವೇಶ ಮಾಡಿ ಹಲವು ಬಾರಿ ಸಚಿವರಾದರು ಇಂದಿಗೂ ಸರಳತೆಯಿಂದಲೇ ಎಲ್ಲರೊಂದಿಗೆ ಬೆರೆಯುತ್ತಾರೆ. ರಾಜ್ಯದ ಪ್ರಗತಿಗೆ ಕೈಗಾರಿಕೆ ಸಚಿವರಾಗಿ ಅವರು ನೀಡಿದ ಕೊಡುಗೆ ಸಹ ಅಪಾರವಾಗಿದೆ ಎಂದಿದ್ದಾರೆ.
ಶಾಸಕರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆ ಅಭಿವೃದ್ದಿಗೆ ದೇಶಪಾಂಡೆಯವರು ಅಪಾರ ಕೊಡುಗೆ ನೀಡಿದ್ದಾರೆ. ಉದ್ಯಮ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿ ಸಾಕಷ್ಟು ಜನರಿಗೆ ಉದ್ಯೋಗವನ್ನ ಅವರು ನೀಡಿದ್ದಾರೆ. ತಮ್ಮ ಟ್ರಸ್ಟ್ ಮೂಲಕ ಬಡ ಮಕ್ಕಳಿಗೆ ಶಿಕ್ಷಣವನ್ನು ಸಹ ಕೊಡುವ ಕಾರ್ಯ ಮಾಡಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಇಡೀ ಜಿಲ್ಲೆಗೆ ಔಷಧಿ, ಇನ್ನಿತರ ವಸ್ತುಗಳನ್ನ ನೀಡಿ ನೆರವಾದವರು ದೇಶಪಾಂಡೆಯವರು. ನನ್ನ ರಾಜಕೀಯ ಜೀವನದಲ್ಲಿ ಅವರ ಮಾರ್ಗದರ್ಶನ ಅಪಾರವಾಗಿದೆ. ಅತ್ಯುತ್ತಮ ಶಾಸಕ ಪ್ರಶಸ್ತಿ ಅವರ ಕಾಯಕಕ್ಕೆ ಸಿಕ್ಕ ಗೌರವವಾಗಿದ್ದು, ಇದು ಇಡೀ ಜಿಲ್ಲೆಗೆ ಹೆಮ್ಮೆಯನ್ನ ತಂದಿದೆ ಎಂದು ಸುಜಾತಾ ಗಾಂವಕರ್ ಹೇಳಿದ್ದಾರೆ.

300x250 AD
Share This
300x250 AD
300x250 AD
300x250 AD
Back to top