Slide
Slide
Slide
previous arrow
next arrow

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಭಾವನೆ ಕ್ರೀಡೆಯಲ್ಲಿರಬೇಕು: ವಿ.ಎನ್.ನಾಯ್ಕ

300x250 AD

ಸಿದ್ದಾಪುರ: ತಾಲೂಕಿನ ಮರಲಗಿಯ ಶ್ರೀಗಣೇಶ ಯುವಕ ಸಂಘ ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ 4ನೇ ವರ್ಷದ ಕಬಡ್ಡಿ ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಗಾಂಧೀಜಿ ನಾಯ್ಕ್ ಉದ್ಘಾಟಿಸಿ ಶುಭ ಕೋರಿದರು. ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಭಾವನೆ ಕ್ರೀಡೆಯಲ್ಲಿ ಮಾತ್ರ ಸಾಧ್ಯ ಎಲ್ಲರೂ ಕ್ರೀಡಾಭಾವನೆಯಿಂದ ಪಾಲ್ಗೊಂಡು ಯಶಸ್ವಿಗೊಳಿಸಿ ಎಂದರು.
ಸ್ಪಂದನ ಸೇವಾ ಸಂಸ್ಥೆಯ ರಾಘವೇಂದ್ರ ನಾಯ್ಕ, ಹಳ್ಳಿಗಳಲ್ಲಿ ಕ್ರೀಡೆ ನಡೆಯುತ್ತಿರುವುದು ಕ್ರೀಡೆ ಉಳಿಯಲು ಕಾರಣವಾಗಿದೆ. ಹಾಗಾಗಿ ಯುವ ಸಂಘಟಕರಿಗೆ ಸಹಾಯ ಸಹಕಾರ ನೀಡಬೇಕು ಎಂದರು. ಪತ್ರಕರ್ತ ದಿವಾಕರ್ ಸಂಪಖoಡ, ಸಂಘಟನೆ ಕೇವಲ ಕ್ರೀಡೆಗಾಗಿ ಸೀಮಿತವಾಗಬಾರದು. ಸಾಮಾಜಿಕ ಕ್ಷೇತ್ರ ಹಾಗೂ ಊರಿನ ಅಭಿವೃದ್ಧಿ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಸಂಘಟಕರಿಗೆ ಪ್ರೋತ್ಸಾಹ ನೀಡಿದರು.
ಇಟಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಂದ್ರ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಇಲ್ಲಿ ಮಾತನಾಡುತ್ತಿರುವುದಕ್ಕೆ ನೀವೇ ಶಕ್ತಿ ನೀಡಿದ್ದೀರಿ ಇನ್ನು ಹೆಚ್ಚಿನ ಚಟುವಟಿಕೆಗಳು ಈ ಸಂಘಟನೆಯಿoದ ಆಗಬೇಕು ಎಂದರು. ರವಿ ಬೇಡ್ಕಣಿ ಸೇರಿದಂತೆ ಊರಿನ ಹಿರಿಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top