ಸಿದ್ದಾಪುರ: ಸಮಾಜವು ಸುಭದ್ರವಾಗಿರಲು ಸಾಂಸ್ಕೃತಿಕ ಕಾರ್ಯಕ್ರಮಗಳು ಅತೀಮುಖ್ಯ ಎಂದು ತಾಲೂಕು ಗೌಡ ಸಾರಸ್ವತ ಸಮಾಜದ ಕಾರ್ಯಾಧ್ಯಕ್ಷ ಜಯವಂತ ಶಾನಭಾಗ ಹೇಳಿದರು.
ಅವರು ಶ್ರೀಲಕ್ಷ್ಮೀವೆಂಕಟೇಶ ದೇವಾಲಯದ ವನಭೋಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೆ ಏರ್ಪಡಿಸಿದ ಉಪಹಾರ ಕೂಟದಲ್ಲಿ ಶಾಲು ಹೊದೆಸಿ ಅಭಿನಂದಿಸಿ ಮಾತನಾಡುತ್ತಿದ್ದರು. ಎರಡು ದಿನದ ಕಾರ್ಯಕ್ರಮಗಳು ತುಂಬಾ ಉತ್ತಮವಾದ ಬಗ್ಗೆ ಮತ್ತು ಪುಟಾಣಿಗಳು ತಮ್ಮ ಕಲೆಯನ್ನು ಅದ್ಬುತವಾಗಿ ಪ್ರದರ್ಶಿಸಿರುವುದನ್ನು ಶ್ಲಾಘಿಸಿದ ಅವರು, ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಆಡಳಿತ ಮಂಡಳಿ ಸದಾ ಬೆಂಬಲಿಸುತ್ತದೆ ಎಂದು ತಿಳಿಸಿದರು.
ವೇದಿಕೆಯ ಮೇಲೆ ನರಸಿಂಹ ಕಾಮತ್, ಸುರೇಶ ಪೈ, ನಾಗೇಶ ಶಾಮೈನ್, ವಿನಾಯಕ ಮಹಾಲೆ, ನಿತ್ಯಾನಂದ ನಾಯಕ ಬೇಂಗ್ರೆ, ವಿವೇಕ ಭಂಡಾರಕರ, ಡಾ. ಸುರೇಶ ಗುತ್ತೀಕರ, ಸವಿತಾ ಕಾಮತ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಮೋಹನ ಭಂಡಾರಕರ ಇದ್ದರು.