Slide
Slide
Slide
previous arrow
next arrow

ಶಬರಿಮಲೆಯಲ್ಲಿ ಮಂಡಲ ಪೂಜೆ ಸಂಪನ್ನ: 39 ದಿನಗಳಲ್ಲಿ 222 ಕೋಟಿ ರೂ. ಕಾಣಿಕೆ ಸಂಗ್ರಹ

300x250 AD

ಕೇರಳ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮಂಡಲ ಪೂಜೆ ಮುಕ್ತಾಯವಾಗಿದೆ. ಈ ವಾರ್ಷಿಕ ಮಂಡಲ ಪೂಜೆ ಋತುವಿನಲ್ಲಿ ಅಂದಾಜು 29 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದು, 222.98 ಕೋಟಿ ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದೆ.
ಶಬರಿಮಲೆಯಲ್ಲಿ 41 ದಿನಗಳ ವಾರ್ಷಿಕ ಮಂಡಲ ಪೂಜೆಯು ನವೆಂಬರ್ 17ರಿಂದ ಆರಂಭವಾಗಿತ್ತು. ಅಯ್ಯಪ್ಪನ ಭಕ್ತರು ಮಂಡಲ ಪೂಜೆಗಿಂತ ಮೊದಲ 41 ದಿನಗಳ ಕಾಲ ವ್ರತವನ್ನಾಚರಿಸುತ್ತಾರೆ. ಪ್ರಸಕ್ತ ವರ್ಷದಲ್ಲಿ ಕಳೆದ ಬಾರಿಗಿಂತ ಶೇ.20ರಷ್ಟು ಭಕ್ತರು ಹೆಚ್ಚುವರಿಯಾಗಿ ದೇವರ ಸನ್ನಿಧಿಗೆ ಹರಿದು ಬಂದಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಹುಂಡಿಯ ಸಂಗ್ರಹವೇ 70 ಕೋಟಿ ರೂ.: ಈ ಋತುಗಳಲ್ಲಿ ಕೋವಿಡ್ ಕಾರಣದಿಂದಾಗಿ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಿಂದ ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಗಿತ್ತು. ಈ ಬಾರಿ 29 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನಕ್ಕೆ ಒಟ್ಟಾರೆ 39 ದಿನಗಳಲ್ಲಿ 222.98 ಕೋಟಿ ರೂ ಕಾಣಿಕೆ ಸಂಗ್ರಹವಾಗಿದೆ. ಇದರಲ್ಲಿ ಹುಂಡಿಯಲ್ಲೇ 70.10 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್ ತಿಳಿಸಿದ್ದಾರೆ.
ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ಮಾರ್ಗದುದ್ದಕ್ಕೂ ಭಕ್ತರಿಗಾಗಿ ಅಚ್ಚುಕಚ್ಚಾದ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು ಮತ್ತು ವೃದ್ಧರಿಗಾಗಿ ವಿಶೇಷ ಸರತಿ ಸಾಲು ವ್ಯವಸ್ಥೆ ಸಹ ಮಾಡಲಾಗಿತ್ತು. ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬoದರೂ ಸಹ ಯಾವುದೇ ಸಮಸ್ಯೆಯ ಬಗ್ಗೆ ಪ್ರಮುಖ ದೂರುಗಳು ಬಂದಿಲ್ಲ. ಈ ಬಾರಿಯ ವಾರ್ಷಿಕ ಮಂಡಲ ಪೂಜೆಯ ಋತುವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದ್ದೇವೆ ಎಂದು ಹೇಳಿದರು.
ದೇವರ ದರ್ಶನಕ್ಕೆ ದೀರ್ಘಾವಧಿ ಕಾಯುವಿಕೆಗೆ ಸಂಬoಧಿಸಿದ ದೂರುಗಳು ಸಹ ಕೇವಲ ಒಂದು ದಿನ ಮಾತ್ರ ಬಂದಿದ್ದವು. ಉಳಿದ ಎಲ್ಲ ದಿನಗಳಲ್ಲೂ ಭಕ್ತರಿಗೆ ತೊಂದರೆಯಾಗದoತೆ ಅತಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಾಗಿದೆ. ಅಯ್ಯಪ್ಪನ ದರ್ಶನಕ್ಕಾಗಿ ಕಾಯುವ ಅವಧಿಯನ್ನು ಕಡಿಮೆ ಮಾಡಲು ಸ್ವಯಂಸೇವಕರು ಮತ್ತು ಪೊಲೀಸ್ ಪಡೆಯು ಸೂಕ್ತವಾದ ಸಮನ್ವಯಯಿಂದ ಕರ್ತವ್ಯ ನಿಭಾಯಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಾರ್ಷಿಕ ಮಂಡಲ ಪೂಜೆ ಋತುವಿನ ಮುಕ್ತಾಯದ ಭಾಗವಾಗಿ ಸುದೀರ್ಘವಾದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದ ಅಂಗವಾಗಿ ಪಡಿಪೂಜೆಯನ್ನೂ ನಡೆಸಲಾಯಿತು. ಮಂಡಲ ಋತುವಿನ ಮುಕ್ತಾಯವನ್ನು ಪ್ರತಿನಿಧಿಸುವ ಪಡಿಪೂಜೆಯ ನಂತರ ದೇವಾಲಯವನ್ನು ಮುಚ್ಚಲಾಯಿತು ಎಂದು ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದರು.

ಡಿ.30ಕ್ಕೆ ಮತ್ತೆ ಬಾಗಿಲು ತೆರೆಯುವ ದೇಗುಲ
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಂಡಲ ಪೂಜೆ ಮತ್ತು ಮಕರ ವಿಳಕ್ಕು ಅತ್ಯಂತ ಪ್ರಸಿದ್ಧವಾದ ಎರಡು ಆಚರಣೆಗಳಾಗಿದೆ. ಈ ಅವಧಿಯಲ್ಲಿ ದೇವಾಲಯವು ಹೆಚ್ಚಿನ ದಿನಗಳವರೆಗೆ ಭಕ್ತರಿಗೆ ತೆರೆದಿರುತ್ತದೆ. ಈಗ ‘ಮಕರ ವಿಳಕ್ಕು’ ಋತುವಿಗಾಗಿ ಡಿ.30ರಂದು ದೇವಾಲಯದವನ್ನು ಪುನಃ ತೆರೆಯಲಾಗುತ್ತದೆ.
ಡಿ.30ರಂದು ಸಂಜೆ 5 ಗಂಟೆಗೆ ಅಯ್ಯಪ್ಪ ದೇವಸ್ಥಾನವನನ್ನು ಮತ್ತೆ ತೆರೆಯಲಾಗುವುದು. ಜನವರಿ 14ರಂದು ಭಕ್ತಿ ದೀಪವನ್ನು ಬೆಳಗಿಸಲಾಗುತ್ತದೆ. ಜನವರಿ 20ರಂದು ದೇವಾಲಯವನ್ನು ಮುಚ್ಚಲಾಗುವುದು. ಈ ಮೂಲಕ ಈ ವರ್ಷದ ಯಾತ್ರೆ ಋತುವನ್ನು ಕೊನೆಗೊಳಿಸಲಾಗುತ್ತದೆ ಎಂದು ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್ ತಿಳಿಸಿದರು.ಇದೇ ವೇಳೆ ‘ಪವಿತ್ರಂ ಶಬರಿಮಲೆ’ ಅಭಿಯಾನದಡಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಲಾಗಿದೆ. ದೇವಸ್ಥಾನ ಹಾಗೂ ಸುತ್ತಮುತ್ತಲಿನ ಆವರಣದಲ್ಲಿರುವ ಎಲ್ಲ ಕಸವನ್ನು ತೆಗೆಯುವ ಮೂಲಕ ಸಂಪೂರ್ಣ ಸ್ವಚ್ಛತೆ ಮಾಡಲಾಗಿದೆ ಎಂದು ಹೇಳಿದರು.

300x250 AD
Share This
300x250 AD
300x250 AD
300x250 AD
Back to top