Slide
Slide
Slide
previous arrow
next arrow

ರಸ್ತೆ ಅಗಲಿಕರಣದಲ್ಲಿ ಒಬ್ಬರಿಗೊಂದು, ಇನ್ನೊಬ್ಬರಿಗೊಂದು ನ್ಯಾಯ: ವಸಂತ ನಾಯ್ಕ ಆರೋಪ

300x250 AD

ಸಿದ್ದಾಪುರ: ಜೋಗ ರಸ್ತೆ ಈಗಾಗಲೇ ಮಂಜೂರಾಗಿದ್ದು, ರಸ್ತೆಯ ಎರಡು ಕಡೆ ರಸ್ತೆ ಕಟಿಂಗ್ ಮಾಡಬೇಕಿತ್ತು. ಆದರೆ ಒಂದು ಕಡೆ ರಸ್ತೆ ಕಟಿಂಗ್ ಸರಿಯಾಗಿ ಮಾಡುತ್ತಿದ್ದು ಇನ್ನೊಂದು ಕಡೆ ಸರಿಯಾಗಿ ಮಾಡುತ್ತಿಲ್ಲ. ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರ ಆಕ್ಷೇಪವಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಆರೋಪಿಸಿದ್ದಾರೆ.
ಅಂದಾಜಿನ ಪ್ರಕಾರ ಎರಡು ಕಡೆಯೂ ಸರಿಯಾಗಿ ರಸ್ತೆ ಕಟಿಂಗ್ ಆಗಬೇಕು. ಭಗತ್ ಸಿಂಗ್ ಸರ್ಕಲ್‌ನ ರಸ್ತೆ ಬಹಳ ಎತ್ತರವಾಗಿದ್ದು, ಅದನ್ನು ಕಟಿಂಗ್ ಮಾಡಿ ನೇರವಾಗಿ ರಸ್ತೆ ಮಾಡಬೇಕೆಂದು ಈಗಾಗಲೇ ಪಿಡಬ್ಲ್ಯೂಡಿ ಎಂಜಿನೀಯರ್‌ಗೆ ತಿಳಿಸಿದ್ದೆವು. ಆದರೆ ಯಾವುದೇ ರೀತಿ ರಸ್ತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಆಗಿಲ್ಲ. ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಎಸ್ಟಿಮೇಟ್ ಪ್ರಕಾರ ಕೆಲಸ ಆಗುತ್ತಿಲ್ಲ ಎಂದು ಸಾರ್ವಜನಿಕರಿಂದ ಆಕ್ಷೇಪವಿದೆ. ಈ ನಿಟ್ಟಿನಲ್ಲಿ ಎಸ್ಟಿಮೇಟ್ ಪ್ರಕಾರ ಕೆಲಸ ಮಾಡದಿದ್ದಲ್ಲಿ ಲೋಕೋಪಯೋಗಿ ಇಲಾಖೆಯ ಎದುರಿಗೆ ಜನಸಾಮಾನ್ಯರೆಲ್ಲರೂ ಸೇರಿ ಬೃಹತ್ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ. ತಕ್ಷಣ ಎಸ್ಟಿಮೇಟ್ ಪ್ರಕಾರ ಕೆಲಸವನ್ನು ಮಾಡಿ ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಬೇಕು. ಈ ನಿಟ್ಟಿನಲ್ಲಿ ಸಭಾಧ್ಯಕ್ಷರು ಮತ್ತು ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಗಮನಹರಿಸಬೇಕು ಎಂದು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top