• Slide
  Slide
  Slide
  previous arrow
  next arrow
 • ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಿಂದೆದ್ದ ಕೊಳಗೀಬೀಸ್: ಮತ್ತೊಮ್ಮೆ ಮನದಲ್ಲಿ ಅಚ್ಚೊತ್ತಿದ ಉ.ದ.ಪಾ.

  300x250 AD

  ಶಿರಸಿ: ತಾಲೂಕಿನ ಕೊಳಗಿಬೀಸಿನ ಶ್ರೀ ಮಾರುತಿ ದೇವರ ಕಾರ್ತೀಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾವಿರಾರು ಪ್ರೇಕ್ಷಕರಿಗೆ ಸದಾ ನೆನಪಿನಲ್ಲಿ ಇರುವಂತೆ ಮಾಡಿದೆ.

  ಹೌದು‌ ಕಳೆದ ವರ್ಷ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ, ಉದ್ಯಮಿ ಶ್ರೀನಿವಾಸ ಹೆಬ್ಬಾರ್ ಮಾರುತಿ ದೇವಾಲಯಕ್ಕೆ ನಿರ್ಮಿಸಿಕೊಟ್ಟ ಮಹಾದ್ವಾರ  ಉದ್ಘಾಟನೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಮಳೆ ವಾತಾವರಣದಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿದ್ದು ಸಂಗೀತಾಸಕ್ತರಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಈ ವರ್ಷ‌ ಶ್ರೀ ಮಾರುತಿಯ ಕಾರ್ತೀಕೋತ್ಸವದ ಅಂಗವಾಗಿ ನ.29 ರಿಂದ ಮೂರು ದಿನಗಳ ಕಾಲ ಕಾರ್ಯಕ್ರಮಗಳನ್ನು  ಪುನಃ ಆಯೋಜಿಸಿ, ಶ್ರೀನಿವಾಸ ಹೆಬ್ಬಾರರು ತಮ್ಮ‌ ಸಂಕಲ್ಪವನ್ನು ನೆರವೇರಿಸಿಕೊಂಡು, ಕಲಾಸಕ್ತರಿಗೆ ಹಬ್ಬದೂಟ ಉಣಿಸಿದರು. ಅಂದು ಮೂರು ದಿನಗಳ ಮಳೆಯಿಂದ ರದ್ದಾಗಿದ್ದರೆ, ಈ ಬಾರಿ  ಮೂರು ದಿನಗಳ ಸಾಂಸ್ಕೃತಿಕ, ಸಂಗೀತದ ಮಳೆ ಸುರಿಯಿತು. ಸಾವಿರಾರು ಖುರ್ಚಿಗಳೂ ಸಾಕಾಗದಂತೆ ಸೇರಿದ್ದ ಜನ ಸಮೂಹವು ಸಂಗೀತದ ಮೋಡಿಗೆ ಒಳಗಾಯಿತು.

  ನ.29 ರಂದು ಗಣಪತಿ ಹೆಗಡೆ ತೋಟಿ ಸಾರಥ್ಯದಲ್ಲಿ ಮೂಡಿಬಂದ ‘ಲಂಕಾದಹನ’ ಯಕ್ಷಗಾನ ಪ್ರಿಯರನ್ನು ರಂಜಿಸಿತ್ತು. ನ.30 ರಂದು ಖ್ಯಾತ ಗಾಯಕಿ ಸಾಧ್ವಿನಿ ಕೊಪ್ಪ ಅವರಿಂದ ಭಕ್ತಿಭಾವ ಲಹರಿ ಮೆಚ್ಚುಗೆಗೆ ಪಾತ್ರವಾಯಿತು. ಅಂತಿಮ ದಿನವಾದ ಡಿ.1 ರಂದು ಸ್ವಯಂಪ್ರಭಾ ಹೆಗಡೆ ಅವರಿಂದ ಭಕ್ತಿ ಭಾವ ಲಹರಿ ಮತ್ತು ಆ ಬಳಿಕ ನಡೆದ ಉ.ದ.ಪಾ. ೨ ವಿಶೇಷ ಸಂಗೀತ ಕಾರ್ಯಕ್ರಮ ಆಕರ್ಷಕವಾಗಿ ಮೂಡಿಬಂತು. ಉತ್ತರಾದಿ,ದಕ್ಷಿಣಾದಿ,ಪಾಶ್ಚಿಮಾತ್ಯ‌ ಸಂಗೀತದ ಸಮ್ಮಿಳಿತವು ನೆರೆದವರನ್ನು ಮಂತ್ರಮುಗ್ಧರನ್ನಾಗಿಸಿತ್ತು.

  300x250 AD

  ಕೊಳಲಿನಲ್ಲಿ ಅಮಿತ್ ನಾಡಿಗ್, ಗಾಯನದಲ್ಲಿ ಸಿದ್ಧಾರ್ಥ ಬೆಳ್ಮಣ್ಣು, ಮೃದಂಗದಲ್ಲಿ ಆನೂರು ವಿನೋದ ಶ್ಯಾಮ್, ತಬಲಾದಲ್ಲಿ ರೂಪಕ ಕಲ್ಲೂರಕರ್,‌ಖಾಂಜಿರಾದಲ್ಲಿ ಸುನಾದ್ ಆನೂರ್, ಡ್ರಮ್ಸ್’ನಲ್ಲಿ ಪ್ರಣವ್‌ ದಾತ್‌ ಪ್ರೇಕ್ಷಕರನ್ನು‌ ಕಾರ್ಯಕ್ರಮದ ಕೊನೆಯವರೆಗೂ ಹಿಡಿದಿಟ್ಟುಕೊಳ್ಳಲು ಯಶಸ್ವಿಯಾದರು. ಮೂರೂ ದಿನ ಗಿರಿಧರ ಕಬ್ನಳ್ಳಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top