• Slide
    Slide
    Slide
    previous arrow
    next arrow
  • ಎಂಎಂ ಮಹಾವಿದ್ಯಾಲಯದಲ್ಲಿ  ಸಂವಿಧಾನ ದಿನ ಕಾರ್ಯಕ್ರಮ

    300x250 AD

     ಶಿರಸಿ: ಭಾರತ ಸಂವಿಧಾನವು ಜಗತ್ತಿನಲ್ಲಿ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಒಂದು ಸಂವಿಧಾನವನ್ನು ರಚಿಸಲು ಅನೇಕ ಅಂಶಗಳು, ತತ್ವ ಸಿದ್ಧಾಂತಗಳನ್ನು ಸೇರಿಸಿ ಸಂವಿಧಾನವನ್ನು ರೂಪಿಸಿದ್ದಾರೆ. ಅಮೆರಿಕ, ಕೆನಡಾ, ಐರೀಶ್, ಸೋವಿಯತ್ ದೇಶದಲ್ಲಿನ ಸಂವಿಧಾನದ ಅಂಶಗಳನ್ನು ಎರವಲು ಪಡೆದು ಡಾಕ್ಟರ್ ಅಂಬೇಡ್ಕರ್ ಅವರ ಸಮಿತಿ 1949 ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಜನವರಿ 26 1950 ರಂದು ಪ್ರಜಾ ರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ. ಎಂದು ಪ್ರಭಾರಿ ಪ್ರಾಚಾರ್ಯ ಡಾ. ಎಸ್.ಎಸ್ ಭಟ್ಟ ಹೇಳಿದರು.

    ಅವರು ಸಂವಿಧಾನ ದಿನದ ಅಂಗವಾಗಿ ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದರು.

                       ಸಂವಿಧಾನ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮುಖ್ಯ ಉದ್ದೇಶವು ಇಂದಿನ ಪ್ರಧಾನಿಯವರಾದ  ನರೇಂದ್ರ ಮೋದಿಯವರು ಅಕ್ಟೋಬರ್ 19 2015 ರಂದು ಅಂಬೇಡ್ಕರವರ ಮೂರ್ತಿ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡುವಾಗ    ಪ್ರತಿ  ವರ್ಷ ನವೆಂಬರ್ 26 ರಂದು ಸಂವಿಧಾನ ದಿನ ಆಚರಣೆ ಮಾಡುವ ಸಪ್ತಾಹ ನೀಡಿದರು. ಅದಕ್ಕೆ ಸಂಬಂಧಿಸಿದ ಕಾನೂನುಗಳನ್ನು ರೂಪಿಸಿ ನವೆಂಬರ್  11, 2015 ರಂದು ಅಧಿಸೂಚನೆ ಹೊರಡಿಸಿದರು. ಅಂದಿನಿಂದ ನವೆಂಬರ್ 26 ನ್ನು  ಸಂವಿಧಾನ ದಿನವಾಗಿ ದೇಶಾದ್ಯಂತ ಆಚರಿಸಲಾಗುತ್ತದೆ.

    300x250 AD

                 ಕಾರ್ಯಕ್ರಮದಲ್ಲಿ ಶಿಕ್ಷಕವೃಂದ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

                   .

    Share This
    300x250 AD
    300x250 AD
    300x250 AD
    Leaderboard Ad
    Back to top