• Slide
    Slide
    Slide
    previous arrow
    next arrow
  • ಗಾಣಿಗ ಮಹಿಳಾ ಸಮಾಜದಲ್ಲಿ ಋತುಬಂಧದ ಮಾಹಿತಿ ಕಾರ್ಯಕ್ರಮ

    300x250 AD

    ಶಿರಸಿ: ಲಯನ್ಸ್ ಕ್ಲಬ್ ಡಾ.ಅ.ನೀ.ಪಟವರ್ಧನ ಫೌಂಡೇಶನ್, IMA ಮಹಿಳಾ ಘಟಕ ಮತ್ತು ಗಾಣಿಗ ಮಹಿಳಾ ಸಮಾಜದ ಸಂಯುಕ್ತಾಶ್ರಯದಲ್ಲಿ ಋತು ಬಂಧದ ಬಗ್ಗೆ, ಆರೋಗ್ಯ ಮತ್ತು ಆಗ ಅನುಸರಿಸಬೇಕಾದ ಜಾಗೃತೆಗಳ ಬಗ್ಗೆ IMA ಮಹಿಳಾ ಘಟಕದ ಅಧ್ಯಕ್ಷೆ ಡಾ. ಶಾಂತಾಭಟ್ ಮತ್ತು ಡಾ. ಗಜಪೂಜಾ ಕಾರಂತ ತಿಳಿಸಿಕೊಟ್ಟರು. PPT ಮುಖಾಂತರ ವಿವರಿಸಿ, ಮಹಿಳೆಯರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಮಹಿಳೆಯರಿಗೆ ಎಷ್ಟೋ ವಿಧದಲ್ಲಿ ಕಿರಿಕಿರಿಯಾಗುವ ಈ ಕಷ್ಟಕಾಲದಲ್ಲಿ ಮನೆಯ ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದು ತಿಳಿಸಿದರು.

    ಲಯನ್ಸ್ ಕ್ಲಬ್‌ನ ಖಜಾಂಚಿ ರಾಜಲಕ್ಷ್ಮಿ ಹೆಗಡೆಯವರು ತಮ್ಮ ತೋಟದಿಂದ ತಂದ ಔಷಧೀಯ ಸಸ್ಯಗಳನ್ನು ದಿನ ನಿತ್ಯ ಅಡುಗೆಯಲ್ಲಿ ಬಳಸುವುದನ್ನು ತಿಳಿಸಿದರು. ಗಾಣಿಗಾ ಮಹಿಳಾ ಸಮಾಜದ ಅಧ್ಯಕ್ಷೆ ಶಶಿಕಲಾರವರು ಎಲ್ಲರನ್ನೂ ಸ್ವಾಗತಿಸಿದರು. ಲಯನ್ ಸುಮಂಗಲಾ ಕಾರ್ಯಕ್ರಮ ನಿರ್ವಹಿಸಿದರು ಮತ್ತು ಕಾರ್ಯದರ್ಶಿ ರಮಾ ಪಟವರ್ಧನ್ ವಂದನಾರ್ಪಣೆ ಮಾಡಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top