Slide
Slide
Slide
previous arrow
next arrow

ಕೆನಡಾ: ಖಲಿಸ್ತಾನಿಗಳ ವಿರುದ್ಧ ತಿರಂಗಾ ಹಿಡಿದು ಪ್ರತಿಭಟಿಸಿದ ಭಾರತೀಯರು

300x250 AD

ಟೊರೆಂಟೋ: ಭಾರತ ಸರ್ಕಾರದ ಪ್ರತಿಭಟನೆಯ ಹೊರತಾಗಿಯೂ, ಕೆನಡಾ ಸರ್ಕಾರವು ಸಿಖ್ ಫಾರ್ ಜಸ್ಟಿಸ್ ಎಂಬ ಭಯೋತ್ಪಾದಕ ಗುಂಪಿಗೆ ತನ್ನ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಕೆನಡಾದಲ್ಲಿನ ಕೆಲವು ಭಾರತೀಯರು ‘ಖಾಲಿಸ್ತಾನ್ ಪ್ರಸ್ತಾವಣೆʼ ವಿರುದ್ಧ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಭಾಗಿಯಾಗಿದ್ದಾರೆ.

ನವೆಂಬರ್ 6 ರಂದು ಮಿಸಿಸೌಗಾದಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಮತ ಚಲಾಯಿಸಲು ಬಂದಿದ್ದ ಖಾಲಿಸ್ತಾನಿ ಬೆಂಬಲಿಗರಿಗೆ ಕೆನಡಾದಲ್ಲಿ ನೆಲೆಸಿರುವ ಕೆಲವು ಭಾರತೀಯ ಮೂಲದವರು ಶಾಂತಿಯುತವಾಗಿ ಧ್ವಜಗಳನ್ನು ತೋರಿಸಿ, ‘ಭಾರತ್ ಮಾತಾ ಕಿ ಜಯ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಶಾಂತಿಯುತ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಿಸ್ಸಿಸೌಗಾದಲ್ಲಿ SFJ ಖಲಿಸ್ತಾನ್ ಜನಮತಗಣನೆ ಹಂತ II ಅನ್ನು ಆಯೋಜಿಸಿದೆ. ವರದಿಗಳ ಪ್ರಕಾರ, ಈ ಬಾರಿ ಭಾರತ ವಿರೋಧಿ ಕಾರ್ಯಕ್ಕೆ ಕಡಿಮೆ ಪ್ರತಿಕ್ರಿಯೆ ದೊರೆತಿದೆ. ಸೆಪ್ಟೆಂಬರ್ 18 ರಂದು ಬ್ರಾಂಪ್ಟನ್‌ನಲ್ಲಿ ನಡೆದ ಮೊದಲ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 100,000 ಕ್ಕೂ ಹೆಚ್ಚು ಕೆನಡಾದ ಸಿಖ್ಖರು ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹಕ್ಕೆ ಮತ ಚಲಾಯಿಸಿದ್ದರು.

ಮಿಸ್ಸಿಸೌಗಾದ ಪಾಲ್ ಕಾಫಿ ಅರೆನಾದಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 75,000 ಕ್ಕೂ ಹೆಚ್ಚು ಕೆನಡಾದ ಸಿಖ್ಖರು ಮತ ಚಲಾಯಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಈ ಜನಾಭಿಪ್ರಾಯ II ಹಂತವು ಭಾರತ ಸರ್ಕಾರದ ಪ್ರತಿಭಟನೆಯ ನಡುವೆಯೂ ನಡೆದಿದೆ.

300x250 AD

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೆನಡಾ ಭೂಮಿಯಲ್ಲಿ ಭಾರತ ವಿರೋಧಿ ಚಟುವಟಿಕೆಯನ್ನು ನಿಲ್ಲಿಸುವಂತೆ ಟ್ರುಡೊ ಸರ್ಕಾರವನ್ನು ಕೇಳಿದೆ. ಭಾರತೀಯ ಕಾನೂನುಗಳ ಅಡಿಯಲ್ಲಿ ಭಯೋತ್ಪಾದಕರು ಎಂದು ಘೋಷಿಸಲ್ಪಟ್ಟ ವ್ಯಕ್ತಿಗಳು ಮತ್ತು ಘಟಕಗಳ ವಿರುದ್ಧ ಕ್ರಮ ಜರುಗಿಸುವಂತೆ ಕೆನಡಾದ ಸರ್ಕಾರವನ್ನು ಕೇಳಿದೆ. ಆದದೂ ಅಲ್ಲಿ ಖಲಿಸ್ತಾನಿ ಚಟುವಟಿಕೆಗಳು ಮುಂದುವರೆದಿದೆ.

ಕೃಪೆ: http://news13.in

Share This
300x250 AD
300x250 AD
300x250 AD
Back to top