• Slide
    Slide
    Slide
    previous arrow
    next arrow
  • ಕೋಗಿಲಬನದ ಮನೆಗೆ ಬಂದಿದ್ದ ಹಾವನ್ನು ರಕ್ಷಿಸಿದ ಉರಗ ಪ್ರೇಮಿ ಸಂತೋಷ್

    300x250 AD

    ದಾಂಡೇಲಿ : ನಗರದ ಸಮೀಪದಲ್ಲಿರುವ ಕೋಗಿಲಬನದ ಮನೆಯೊಂದರಲ್ಲಿ ಹಾವೊಂದು ಪ್ರತ್ಯಕ್ಷವಾಗಿ ಮನೆಮಂದಿಯೆಲ್ಲಾ ಆತಂಕಗೊಂಡ ಘಟನೆ ಶುಕ್ರವಾರ ನಡೆದಿದೆ.

    ಕೋಗಿಲಬನದ ನಿವಾಸಿ ಸಂತೋಷ್ ಕೇರವಾಡಕರ ಎಂಬವರ ಮನೆಗೆ ಇಂದು ಹಾವೊಂದು ದೀಢೀರನೆ ಭೇಟಿ ಕೊಟ್ಟು ಭಯದ ವಾತವಾವರಣವನ್ನು ನಿರ್ಮಿಸಿತ್ತು. ತಕ್ಷಣವೆ ಹಾವು ಬಂದಿರುವ ಮಾಹಿತಿಯನ್ನು ಕೋಗಿಲಬನದ ಉರಗಪ್ರೇಮಿ ಸಂತೋಷ್ ಅವರಿಗೆ ನೀಡಲಾಯ್ತು. ತಡವರಿಯದೇ ಸ್ಥಳಕ್ಕೆ ಧಾವಿಸಿದ ಉರಗಪ್ರೇಮಿ ಸಂತೋಷ್ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಂದಿದ್ದಾರೆ. ಮೊಸಳೆಯ ಬಗ್ಗೆ ಖ್ಯಾತಿ ಪಡೆದಿದ್ದ ಕೋಗಿಲಬನದಲ್ಲಿ ಹಾವುಗಳು ಆಗೊಮ್ಮೆ ಈಗೊಮ್ಮೆ ಸ್ಥಳೀಯ ಮನೆಗಳಿಗೆ ಲಗ್ಗೆಯಿಡುತ್ತಿರುವುದು ಸಾಮಾನ್ಯವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top