Slide
Slide
Slide
previous arrow
next arrow

ಕಿಬ್ಬಳ್ಳಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

300x250 AD

ಸಿದ್ದಾಪುರ: ತಾಲೂಕಿನ ಕಿಬ್ಬಳ್ಳಿಯ ಶ್ರೀ ಮಹಾಗಣಪತಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ನಡೆಯಿತು. ಕನ್ನಡ ರಾಜ್ಯೋತ್ಸವದ ದಿನ ಹಿರಿಯರ ಗೌರವ ನಮನ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿತ್ತು. ಈ ದಿನ ಈ ಭಾಗದ ಹಿರಿಯ ಸಹಕಾರಿಗಳಾದ ಜಿ.ಎಂ. ಹೆಗಡೆ ಮಾನಿಮನೆ (ಚಿಟ್ ಮಾಂವ) ಹಾಗೂ ಮೇಲಿನ ಮಸ್ಗುತ್ತಿಯ ಕೃಷಿಕರು ಆದ ನಾರಾಯಣ ಶಂಕ್ರಪ್ಪ ಹೆಗಡೆ ಹಾಗೂ ಅತ್ತಿಸವಲಿನ ಕೃಷಿಕರು ಹಾಗೂ ನಾಟಿ ವೈದ್ಯರಾದ ಮಂಜ ಸುಬ್ಬ ಗೌಡ ಅವರುಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದೇಶಭಕ್ತಿ ಗೀತೆ, ಭಾವಗೀತೆ, ಭಕ್ತಿಗೀತೆ, ನಾಡಗೀತೆ, ನಾಡ ದೇಶಭಕ್ತಿ ಗೀತೆಗಳು ಪ್ರಸ್ತುತಗೊಂಡವು. ಸನ್ಮಾನಿತರ ಪರವಾಗಿ ಜಿಎಂ ಹೆಗಡೆ ಮಾನಿಮನೆಯವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾಗಪತಿ ಭಟ್ ಮಿಳ್ಗಾರ್ ಅವರು ವಹಿಸಿದ್ದರು. ಶಂಕರ್ ನಾರಾಯಣ ಹೆಗಡೆ ಶಿರ್ಗೋಡಬೈಲು, ಶಂಕರನಾರಾಯಣ ವೆಂಕಟ್ರಮಣ ಹೆಗಡೆ ಕಿಬ್ಬಳ್ಳಿ, ಎಂಜಿ ಹೆಗಡೆ ಗಜ್ಜೆ , ಶಾಲೆ ಮುಖ್ಯಾಧ್ಯಾಪಕರಾದ ಜಿವಿ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಶಿವಾನಂದ್ ಎಚ್.ಎಂ. ಅವರು ಕಾರ್ಯಕ್ರಮ ನಿರ್ವಹಿಸಿದರೆ ಕೊನೆಯಲ್ಲಿ ಸಹ ಶಿಕ್ಷಕರಾದ ಶ್ರೀಧರ ಹೆಗಡೆ ಬಪ್ಪನಕೊಡ್ಲು ವಂದನಾರ್ಪಣೆ ಗೈದರು.

300x250 AD
Share This
300x250 AD
300x250 AD
300x250 AD
Back to top